ಕುಮಟಾ : ಮಡಿವಾಳ ಸಮಾಜದ ಪ್ರಮುಖರು ಗುರುವಾರ ಕುಮಟಾ ಹೊನ್ನಾವರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ನಿವೇದಿತ್ ಆಳ್ವಾ ಇವರ ನಿವಾಸಕ್ಕೆ ತೆರಳಿ, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಮಡಿವಾಳ ಸಮಾಜದ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕೆಂದು ಶ್ರೀಮತಿ ಮಾರ್ಗರೆಟ್ ಆಳ್ವ ಅವರ ಸಮ್ಮುಖದಲ್ಲಿ ಮನವಿ ನೀಡಿದರು.
ಸಮುದಾಯ ಭವನ ನಿರ್ಮಾಣ ಮಾತ್ರವಲ್ಲ, ಮಡಿವಾಳ ಸಮಾಜದ ಅಭಿವೃದ್ಧಿಗೂ ನಾನು ಬದ್ಧನಿದ್ದೇನೆ. ಶೋಷಿತ ಸಮಾಜಗಳನ್ನು ಕೂಡ ಅಭಿವೃದ್ಧಿಯ ಹಾದಿಯಲ್ಲಿ ಜೊತೆಯಾಗಿ ಕರೆದುಕೊಂಡು ಹೋಗಬೇಕೆಂಬುದು ನನ್ನ ಆಶಯ. ಹೀಗಾಗಿ ಕ್ಷೇತ್ರದ ಎಲ್ಲಾ ಜಾತಿ, ಧರ್ಮಗಳ ಜನರು ಇಂದು ನನ್ನ ಜೊತೆ ಕೈಜೋಡಿಸುತ್ತಿದ್ದಾರೆ ಎಂದು ನಿವೇದಿತ್ ಆಳ್ವಾ ತಿಳಿಸಿದರು.
ನಾವೆಲ್ಲರೂ ಜೊತೆಯಾಗಿ ಉಜ್ವಲ ಭವಿಷ್ಯ ರೂಪಿಸೋಣ. ಕುಮಟಾ – ಹೊನ್ನಾವರ ಕ್ಷೇತ್ರವನ್ನು ಮಾದರಿಯಾಗಿಸೋಣ ಎಂದು ಈ ಸಮಯದಲ್ಲಿ ಹೇಳಿದರು. ಪ್ರಮುಖರಾದ ಉದಯ ಮಡಿವಾಳ, ನಾರಾಯಣ ಮಡಿವಾಳ,ಅನಿಲ ಮಡಿವಾಳ, ಗಜಾನನ ಮಡಿವಾಳ, ಜಟ್ಟಿ ಮಡಿವಾಳ, ರಮೇಶ ಮಡಿವಾಳ, ಪ್ರಕಾಶ ಮಡಿವಾಳ, ಉದಯ ಮಡಿವಾಳ, ಇವರ ಜೊತೆ ಕೆಪಿಸಿಸಿ ಸಮುಯೋಜಕರಾದ ನಾಗರಾಜ ಮಡಿವಾಳ ಸಾಥ್ ನೀಡಿದರು.