ಕುಮಟಾ : ತಾಲೂಕಿನ ತೊರ್ಕೆ ಗ್ರಾಮಪಂಚಾಯತ್ ಅಧ್ಯಕ್ಷ ಆನಂದು ಕವರಿ ಅವರ ನೇತೃತ್ವದಲ್ಲಿ ತೊರ್ಕೆ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಂಜುನಾಥ ನಾಯಕ ದೇವರಬಾವಿ ಹಾಗೂ ಅವರ ಸಹಚರರು ಇಂದು ದಿನಕರ ಶೆಟ್ಟಿಯವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.

ಈ ಮೊದಲು ಮಂಜುನಾಥ ನಾಯಕ ಅವರು ಜೆಡಿಎಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದು, ತೊರ್ಕೆ ಭಾಗದ ಪ್ರಭಾವಿ ಮುಖಂಡರಲ್ಲಿ ಒಬ್ಬರಾಗಿದ್ದರು. ಅವರ ಸಹಚರರಾದ ಗೋವಿಂದ ದೇಶದಭಂಡಾರಿ, ವೆಂಕಟರಮಣ ತೊರೆಗಜನೆ, ಮಂಜು ತೊರೆಗಜನೆ, ಕೇಶವ ತೊರೆಗಜನೆ, ಬಾಲಚಂದ್ರ ತೊರೆಗಜನೆ, ಹೊನ್ನಪ್ಪ ತೊರೆಗಜನೆ, ಮನೋಜ ತೊರೆಗಜನೆ, ರಾಮಕೃಷ್ಣ ತೊರೆಗಜನೆ, ಸಂತೋಷ ತೊರೆಗಜನೆ, ಕಾಂತೇಶ ತೊರೆಗಜನೆ, ಕೃಷ್ಣ ತೊರೆಗಜನೆ ಅವರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು. ವೆಂಟು ಕವರಿ, ಆನಂದು ಕವರಿ ಹಾಗೂ ಸದಾನಂದ ನಾಯಕ ಅವರು ಜೊತೆಗಿದ್ದರು.

RELATED ARTICLES  ಅಭ್ಯರ್ಥಿಗಳ ಆಯ್ಕೆಯಲ್ಲಿ ಸಂಘ ಪರಿವಾರದ ಪಾತ್ರವಿಲ್ಲ – ವಿಕ್ರಮಾರ್ಜುನ ಹೆಗ್ಗಡೆ

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರು ಪಕ್ಷದ ಶಾಲು ಹೊದೆಸುವ ಮೂಲಕ ಎಲ್ಲರನ್ನು ಬಿಜೆಪಿಗೆ ಬರಮಾಡಿಕೊಂಡರು. ಪಕ್ಷ ಹಾಗೂ ನನ್ನನ್ನು ಬೆಂಬಲಿಸಿ ಸೇರ್ಪಡೆಯಾಗಿರುವ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದ ಅವರು, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಭರವಸೆಯನ್ನು ನೀಡಿದರು.

RELATED ARTICLES  ಕುಮಟಾದಲ್ಲಿ ಕೊರೋನಾ ಕೇಕೆ : ಬರೋಬ್ಬರಿ 30 ಜನರಲ್ಲಿ ಇಂದು ಕೊರೋನಾ ಪಾಸಿಟೀವ್..!