ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಪಟ್ಟಣದ ಗುಜರಗಲ್ಲಿ ಶ್ರೀ ರಾಯೇಶ್ವರ ಕಾಮಾಕ್ಷೀ ದೇವಿ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು. ಚುನಾವಣೆಯಲ್ಲಿ ಜಯ ಪ್ರಾಪ್ತವಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಗೈದರು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಸುರೇಂದ್ರ ಆಚಾರ್ಯ, ಸುಶಾಂತ ಆಚಾರ್ಯ, ಪಕ್ಷದ ಕಾರ್ಯಕರ್ತರು ಹಾಗೂ ಅರ್ಚಕರಾದ ಸುಮಂತ ಆಚಾರ್ಯ , ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರಸಾದ ನಾಯಕ, ಕುಮಾರ ಕವರಿ ಮತ್ತಿತರರು ಜೊತೆಗಿದ್ದರು.