ಕುಮಟಾ ತಾಲೂಕು ಕತಗಾಲ್, ದೀವಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಮಟಾ ಹೊನ್ನಾವರ ಕಾಂಗ್ರೆಸ್ಸ್ ಪಕ್ಷದ ಅಭ್ಯರ್ಥಿ ಶ್ರೀ ನಿವೇದಿತ್ ಆಳ್ವಾ ಇವರು ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ಸಮಸ್ಯೆಗಳು ಹಾಗೂ ನಮ್ಮ ಪಕ್ಷದ ಪ್ರಣಾಳಿಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.
ಇದೇ ವೇಳೆ ಪಕ್ಷದ ಹಲವು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಜೊತೆ ಪಾದಯಾತ್ರೆಯ ಮೂಲಕ ತೆರಳಿ, ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕ್ಷೇತ್ರದಲ್ಲಿ ನನ್ನನ್ನು ಆಶೀರ್ವದಿಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ನಿತ್ಯ ನಮ್ಮ ಪ್ರಚಾರ ಕಾರ್ಯಗಳಿಗೆ ಹರಿದು ಬರುತ್ತಿರುವ ಜನಸಾಗರವೇ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಖಚಿತ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಅಭಿವೃದ್ಧಿಗಾಗಿ ಕೈಜೋಡಿಸುತ್ತಿರುವ ಎಲ್ಲ ಸಹೃದಯಿಗಳಿಗೂ ನಾನು ಆಭಾರಿ ಎಂದು ಈ ಸಂಧರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೊನ್ನಪ್ಪ ನಾಯಕ್, ಮಹಿಳಾ ಅಧ್ಯಕ್ಷರಾದ ಸುರೇಖಾ ವಾರೇಕರ್, ಪ್ರಮುಖರಾದ ಯಶೋಧರ ನಾಯ್ಕ್, ಆರ್ ಎಚ್ ನಾಯ್ಕ್, ಕೃಷ್ಣಾನಂದ್ ಕತಗಾಲ್, ವಿ ಎಲ್ ನಾಯ್ಕ್, ಜಿ ಜಿ ಹೆಗಡೆ, ಕೃಷ್ಣೆ ಗೌಡ, ರಾಘವೇಂದ್ರ ಪಟಗಾರ್, ಮಹಾದೇವಿ ಗೌಡ, ಫ್ರಾಂಕಿ ಫೆರ್ನಾಂಡಿಸ್, ಶಂಕರ್ ಗೌಡ,ಶ್ರೀಧರ್ ಗೌಡ, ಲಕ್ಷ್ಮಿ ಗೌಡ, ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಊರ ನಾಗರಿಕರು, ಹಾಗೂ ಪಕ್ಷದ ಹಿರಿ ಕಿರಿಯ ಮುಖಂಡರು ಉಪಸ್ಥಿತರಿದ್ದರು.