ಕುಮಟಾ: ಜೆಡಿಎಸ್ ಅಭ್ಯರ್ಥಿಯಾದ ಸೂರಜ್ ನಾಯ್ಕ ಸೋನಿ ತಾಲೂಕಿನ ಹೊಲನಗದ್ದೆ, ಬಾಡ, ಕಾಗಲ ಹಾಗೂ ಅಘನಾಶಿನಿ ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಅವರಿಗೆ ಎಲ್ಲಾ ಜಾತಿ, ಧರ್ಮದ ಜನರು ಪ್ರೀತಿಯಿಂದ, ವಿಶ್ವಾಸದಿಂದ ಅವರನ್ನು ಬೆಂಬಲಿಸುವ ರೀತಿಯನ್ನು ಕಂಡು ಸಂತಸ ಪಟ್ಟರು, ಈ ವೇಳೆ ಮಾತನಾಡಿ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು ದುಡ್ಡಿನಿಂದ ರಾಜಕಾರಣ ಮಾಡಿ ಜನರಿಂದ ಮತ ಪಡೆದು ಅಧಿಕಾರ ಪಡೆಯಬಹುದು ಎನ್ನುವ ಉದ್ದೇಶ ಹೊಂದಿದ್ದಾರೆ. ಆದರಿಂದ ಅವರು ರೈತರಿಗೆ ಅನುಕೂಲವಾಗುವ ನೀರಾವರಿ ಯೋಜನೆ, ಹಾಗೂ ಕುಡಿಯುವ ನೀರಿನ ಪೂರೈಕೆ, ಮೀನುಗಾರಿಗೆ, ಮಹಿಳೆಯರಿಗೆ ಯುವಕರಿಗೆ ಸರಿಯಾದ ಸರಕಾರಿ ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನು ಶಾಸಕರಾದ ದಿನಕರ ಶೆಟ್ಟಿಯವರು ತಾನು ಶೇಡಕಾ ೭೫ ಪರ್ಸೆಂಟ್ ಕಾಮಗಾರಿ ಮಾಡಿ ಚುನಾವಣೆಯ ಸಂದರ್ಭದಲ್ಲಿ ೨೫ ಪರ್ಸೆಂಟ್ ಕಾಮಗಾರಿ ಮಾಡುತ್ತೇನೆ ಇಲ್ಲ ಅಂದ್ರೆ ಜನರು ಮರೆತು ಬೀಡುತ್ತಾರೆ ಎಂದು ಹೇಳಿಕೊಂಡಿದ್ದಾರೆ ಇದನ್ನು ನೋಡಿದ್ರೆ ಬರಿ ಜನಪರ ಕಾಳಜಿಕಿಂತ ರಾಜಕಾರಣವೇ ಇಲ್ಲಿ ಎದ್ದುಕಾಣುತ್ತದೆ ಎಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ಹಲವಾರು ಆಕಾಂಕ್ಷಿಗಳನ್ನು ಕಡೆಗಣಿಸಿ ಅವರು ಬೇರೆ ಕ್ಷೇತ್ರದಿಂದ ಬಂದಂತಹ ನಿವೇದಿತ್ ಆಳ್ವಾರಿಗೆ ಟಿಕೇಟ್ ನೀಡಿದ್ದಾರೆ. ಅವರಂತು ದುಡ್ಡಿನ ಆಧಾರದ ಮೇಲೆ ಚುನಾವಣೆಯನ್ನು ಗೆಲ್ಲಲು ಹೊರಟಿದ್ದಾರೆ. ನೀವು ಬೇರೆ ಕ್ಷೇತ್ರದಿಂದ ಬಂದ ಅಭ್ಯರ್ಥಿಯನ್ನು ದುಡ್ಡಿನ ಆಧಾರದ ಮೇಲೆ ಅವರನ್ನು ಬೆಂಬಲಿಸಿದ್ರೆ ಮುಂದೊಂದು ದಿನ ಟಾಟಾ, ಬಿರ್ಲಾನಂತಹ ದುಡ್ಡಿರುವಂತಹವರು ಬಂದು ನಮ್ಮ ಕ್ಷೇತ್ರಕ್ಕೆ ನಿಂತು ಆಯ್ಕೆಯಾಗಿ, ಇಲ್ಲಿನ ರೈತರ ಭೂಮಿಯನ್ನು ಖರೀಧಿ ಮಾಡಿ, ಈ ಭಾಗದ ಜನರಿಗೆ ಅನ್ಯಾಯಾಗುತ್ತದೆ ಎಂದು ಹೇಳಿದರು.

RELATED ARTICLES  ಶಿರಸಿ ಟಿ.ಎಸ್.ಎಸ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ನೂತನ ಮಾರಾಟ ಮಳಿಗೆ ಪ್ರಾರಂಭ


ಈ ವೇಳೆ ಜೆಡಿಎಸ್ ಪಕ್ಷಕ್ಕೆ ವಿವಿಧ ಪಕ್ಷದ ಕಾರ್ಯಕರ್ತರು ಸೇರ್ಪಡೆಗೊಂಡರು. ಈ ಸಂಧರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷರಾದ ಸಿ.ಜಿ.ಹೆಗಡೆ, ದತ್ತಾ ಪಟಗಾರ, ಜಿ.ಕೆ.ಪಟಗಾರ, ನಾಮಧಾರಿ ಸಂಘದ ತಾಲೂಕಾಧ್ಯಕ್ಷರಾದ ಮಂಜುನಾಥ ನಾಯ್ಕ, ಇತರಿದ್ದರು.

RELATED ARTICLES  ವ್ಯಕ್ತಿತ್ವ ವಿಕಸನಕ್ಕೆ ಆಟೋಟ ಸ್ಪರ್ಧೆಗಳು ಅಗತ್ಯ : ದಿನಕರ ಶೆಟ್ಟಿ.