ಕುಮಟಾ : ಮೊಗವೀರ ಸಮಾಜದ ಅಧ್ಯಕ್ಷರಾದ ಜಯವಂತ್ ಹಾಗೂ ಭಟ್ಕಳದ ಜೈಭೀಮ್ ಸಂಘಟನೆಯ ಅಧ್ಯಕ್ಷರಾದ ಮಹೇಶ್ ಮೊಗವೀರ ಅವರ ಮುಂದಾಳತ್ವದಲ್ಲಿ ಗುರುದಾಸ್ ಮೊಗವೀರ, ಗಣೇಶ್ ಮೊಗವೀರ, ಚನ್ನಯ್ಯ ಮೊಗವೀರ, ರಾಮ ಮೊಗವೀರ, ನಾಗರಾಜ್ ಮೊಗವೀರ ಸೇರಿದಂತೆ ಹಲವು ಮಂದಿ ಇಂದು ಕುಮಟಾದ ಕಾಂಗ್ರೆಸ್ ಕಚೇರಿಗೆ ಆಗಮಿಸಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದರು.
ಸರ್ವ ಜಾತಿ, ಧರ್ಮಗಳ ಜನರನ್ನು ಸಮಾನವಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎಂಬ ನನ್ನ ಚಿಂತನೆಯನ್ನು ಮೆಚ್ಚಿ ಇಂದು ಸಮಾಜದ ಎಲ್ಲಾ ಸಮುದಾಯಗಳ ಜನರು ಸಾಗರದಂತೆ ಬಂದು ಕೂಡಿಕೊಳ್ಳುತ್ತಿದ್ದಾರೆ. ನನ್ನ ಮೇಲೆ ಭರವಸೆಯಿಟ್ಟು, ನನ್ನೊಂದಿಗೆ ಕೈಜೋಡಿಸುತ್ತಿರುವ ಎಲ್ಲಾ ಮನಸುಗಳಿಗೂ ನಾನು ಆಭಾರಿ. ಈ ಬಾರಿ ನನಗೆ ಶಾಸಕನಾಗುವ ಅವಕಾಶ ದೊರೆತರೆ ನಿಮ್ಮ ಸೇವೆಯ ಮೂಲಕ ತಮ್ಮೆಲ್ಲರ ಪ್ರೀತಿಯ ಋಣ ಭಾರವನ್ನು ಕಡಿಮೆ ಮಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕುಮಟಾ ಹೊನ್ನಾವರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿವೇದಿತ್ ಆಳ್ವಾ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಜೆ ಡಿ ನಾಯ್ಕ, ಕುಮಟಾ ಬ್ಲಾಕ್ ಅಧ್ಯಕ್ಷರಾದ ಹೊನ್ನಪ್ಪ ನಾಯಕ್ ,ಮುಖಂಡರಾದ ಆರ್ ಎಚ್ ನಾಯ್ಕ್, ವಿ ಎಲ್ ನಾಯ್ಕ್, ಮೊಗೇರ ಸಮಾಜ ಕುಮಟಾ ಹಾಗೂ ಜೈ ಭೀಮ್ ಸಂಘಟನೆ ಭಟ್ಕಳ ಅಧ್ಯಕ್ಷರು ಮಹೇಶ್ ಮೊಗೇರ ಗಣೇಶ್ ಮೊಗೇರ, ಗುರು ದಾಸ್ ಮೊಗೇರ , ರಾಮ ಮೊಗೇರ , ಚೆನ್ನಯ್ಯ ಮೊಗೇರ , ನಾಗರಾಜ್ ಮೊಗೇರ ಮುಂತಾದವರು ಉಪಸ್ಥಿತರಿದ್ದರು.