ಅಂಕೋಲಾ : ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ಇದೇ ಬರುವ ಮೇ 3 ರಂದು ಉತ್ತರಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಅಂಕೋಲಾ‌ ತಾಲ್ಲೂಕಿನ ಹಟ್ಟಿಕೇರಿಗೆ ಆಗಮಿಸಲಿದ್ದಾರೆ. ಮೋದಿಜಿರವರ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ಸಾಗಿದೆ. ಕಾರ್ಯಕ್ರಮಕ್ಕೆ 3 ಲಕ್ಷಕ್ಕೂ ಅಧಿಕ ಜನ‌ ಸೇರಲಿದ್ದಾರೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ರವರು ತಿಳಿಸಿದ್ದಾರೆ.


ಮೋದಿಜಿರವರ ಸ್ವಾಗತಕ್ಕೆ ಜಿಲ್ಲೆಯ ಹಾಗೂ ಕ್ಷೇತ್ರದ ಜನತೆ ಅತ್ಯಂತ ಹೆಚ್ಚು ಉತ್ಸುಕರಾಗಿದ್ದಾರೆ. ಮೋದಿಜಿರವರ ಕಾರ್ಯಕ್ರಮಕ್ಕೆ ಮೈದಾನ ಸಿದ್ಧತೆಯ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದರು. ಮೋದಿಜಿರವರ ಆಗಮನ ಕ್ಷೇತ್ರ ಹಾಗೂ ಜಿಲ್ಲೆಯ ಜನತೆಯಲ್ಲಿ‌ ಹೊಸ ಸಂಚಲನ ಮೂಡಿಸಿದೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಅತ್ಯಂತ ಉತ್ಸುಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಮೋದಿಜಿರವರು ಆಗಮಿಸುತ್ತಿದ್ದಾರೆ ಎಂದು ತಿಳಿದ ತಕ್ಷಣ ವಿರೋಧಿಗಳಿಗೆ ಭಯ ಉಂಟಾಗಿ ಕಾರ್ಯಕ್ರಮವನ್ನು ತಡೆಯುವ ವ್ಯರ್ಥ ಪ್ರಯತ್ನ ಮಾಡಿದರು ಆದರೆ ಅದನ್ನೆಲ್ಲ ಲೆಕ್ಕಿಸದೆ ನಾವು ಒಂದಾಗಿ ಈ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಡೆಸಿಕೊಡಲಿದ್ದೇವೆ ಎಂದರು. ಪ್ರಧಾನಿಯಾಗಿ ಆಯ್ಕೆಯಾದ ನಂತರ ಜಿಲ್ಲೆಗೆ ಪ್ರಪ್ರಥಮವಾಗಿ ಮೋದಿಜಿರವರು ಆಗಮಿಸುತ್ತಿದ್ದಾರೆ ಇದು ಅತ್ಯಂತ ಸಂತಸದ ವಿಷಯ ಕ್ಷೇತ್ರ ಹಾಗೂ ಜಿಲ್ಲೆಯ ಹಳ್ಳಿ ಹಳ್ಳಿಯ ಜನ‌ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ‌. ಮೋದಿಜಿರವರ ಆಗಮನಕ್ಕೆ ಜಿಲ್ಲೆಯ ಜನತೆ ಕಾತರದಿಂದ ಕಾದಿದೆ ಆ ಅಭೂತಪೂರ್ವ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗೋಣ ಈ ಕಾರ್ಯಕ್ರಮ ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಅದ್ಭುತ ಕಾರ್ಯಕ್ರಮವನ್ನಾಗಿಸೋಣ ಎಂದರು.

RELATED ARTICLES  ಬೆಳಕು ಎಲ್ಲಿಂದಲೇ ಬರಲಿ ಬೆಳಕಿಗೆ ತಾರತಮ್ಯವಿಲ್ಲ-ಉಮೇಶ ಮುಂಡಳ್ಳಿ


ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಗಣಪತಿ ಉಳ್ವೇಕರ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ, ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ರಾಜೇಂದ್ರ ನಾಯ್ಕ, ಚುನಾವಣಾ ಕ್ಷೇತ್ರ ಪ್ರಭಾರಿ ಶ್ರೀ ಜಗದೀಶ ನಾಯಕ ಮೊಗಟಾ, ಬಿಜೆಪಿ‌ ಅಂಕೋಲಾ ಮಂಡಲಾಧ್ಯಕ್ಷರಾದ ಶ್ರೀ ಸಂಜಯ ನಾಯ್ಕ ಹಾಗೂ ಭಾಸ್ಕರ ನಾರ್ವೇಕರ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಈ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES  ಆತ್ಮಹತ್ಯೆಗೆ ಶರಣಾದ ಶಿಕ್ಷಕಿ…!