ಮಿರ್ಜಾನ ಪಂಚಾಯತ್ ವ್ಯಾಪ್ತಿಯ ಶಕ್ತಿಕೇಂದ್ರದ ಯಲವಳ್ಳಿಯಲ್ಲಿ, ಮಂಡಲ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸಂಚಾಲಕ ಬಾಳಾ ಡಿಸೋಜ ಹಾಗೂ ಗ್ರಾಮಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಮಡಿವಾಳ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.
ಮಿರ್ಜಾನ್ ಭಾಗದ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮಪಂಚಾಯತ್ ಮಾಜಿ ಸದಸ್ಯ ದೀಪಕ್ ಭಟ್, ನಾಗೇಶ್ ಮಡಿವಾಳ, ಸುರೇಶ ಮಡಿವಾಳ, ನಾರಾಯಣ ಮಡಿವಾಳ, ಸುಲೋಚನಾ ಮಡಿವಾಳ ಸೇರಿದಂತೆ ಅನೇಕರು ಕೇಸರಿಪಡೆಯನ್ನು ಸೇರಿಕೊಂಡರು.
ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಹಾಗೂ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಪಕ್ಷದ ಶಾಲು ಹೊದೆಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಮಹಾಶಕ್ತಿಕೇಂದ್ರದ ಅಧ್ಯಕ್ಷ ಮಹೇಶನಾಯಕ ದೇವರಬಾವಿ, ಜಿಲ್ಲಾ ಪ್ರಮುಖರಾದ ಗಜಾನನ ಗುನಗಾ, ಪಂಚಾಯತ್ ಉಪಾಧ್ಯಕ್ಷೆ ಸೀತಾ ಭಟ್, ಸದಸ್ಯರಾದ ಈಶ್ವರ ಮರಾಠಿ, ಮಂಜುನಾಥ ಮರಾಠಿ, ಬೂತ್ ಅಧ್ಯಕ್ಷ ಕೆ. ಪಿ. ಹೆಗಡೆ ಮತ್ತಿತರರು ಇದ್ದರು.