ಕುಮಟಾ : ತನ್ನದೇ ಆಗಿರುವ ವಿಶೇಷ ಪ್ರಾಕೃತಿಕ ಪರಿಸರ ಹಾಗೂ ಅತ್ಯುತ್ತಮವಾಗಿ ರೂಪಿಸಬಹುದಾದ ವ್ಯವಸ್ಥೆಗಳನ್ನು ಹೊಂದಿರುವ ಕುಮಟಾ – ಹೊನ್ನಾವರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶಗಳಿದ್ದರೂ ಸ್ಥಳೀಯ ಜನಪ್ರತಿನಿಧಿಯ ನಿಷ್ಕ್ರಿಯತೆಯಿಂದಾಗಿ ಗ್ರಾಮಗಳ ಜನ ಉದ್ಯೋಗ ಅರಸಿ ಬೇರೆ ನಗರಗಳಿಗೆ ವಲಸೆ ಹೋಗಬೇಕಾಗಿದೆ‌. ಈ ಸ್ಥಿತಿ ಹೀಗೆಯೇ ಮುಂದುವರೆದುಕೊಂಡು ಹೋಗುವುದು ಬೇಡ, ನಿಮ್ಮೂರಿನಲ್ಲಿಯೇ ನಿಮಗೆ ಬದುಕು ಕಟ್ಟಿಕೊಳ್ಳುವ ಕನಸಿದ್ದರೆ ನನ್ನನ್ನು ಬೆಂಬಲಿಸಿ, ನಿಮ್ಮ ಕನಸುಗಳ ಸಾಕಾರಕ್ಕಾಗಿ ನಾನು ದುಡಿಯುತ್ತೇನೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ನಿವೇದಿತ್ ಆಳ್ವಾ ಇವರು ಹೇಳಿದರು. ಅವರು ತಾಲೂಕಿನ ಕಾಗಾಲ್ ಹಾಗೂ ಅಘನಾಶಿನಿ ಭಾಗಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸುವ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.

RELATED ARTICLES  ಮಕ್ಕಳು ಹಣ ಗಳಿಕೆಯ ಯಂತ್ರವಾಗಬಾರದು: ಭೀಮಣ್ಣ ನಾಯ್ಕ

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ ಎಲ್ಲ ಕ್ಷೇತ್ರಗಳಿಗಿಂತ ವಿಭಿನ್ನವಾಗಿದ್ದು ಇಲ್ಲಿಯ ಜನಜೀವನ ಅತ್ಯುತ್ತಮವಾಗಿ ರೂಪುಗೊಳ್ಳಲು ಅಗತ್ಯವಾದ ಅನೇಕ ಯೋಜನೆಗಳನ್ನು ನಾವು ಜಾರಿಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಸಾಮಾನ್ಯ ಜನಜೀವನದ ಕಷ್ಟ ನಷ್ಟಗಳನ್ನು ಅರಿತಿರುವ ನಾನು ಜನರಿಗಾಗಿ ಸೇವೆ ಮಾಡಲು ಅವಕಾಶ ನೀಡಿ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಮಳೆಯ ಮುನ್ನೆಚ್ಚರಿಕೆ : ಅ. 8 ಗುರುವಾರದಂದು ಶಾಲೆಗಳಿಗೆ ರಜೆ.

ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರತ್ನಾಕರ ನಾಯ್ಕ ಇವರು ಮಾತನಾಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಲ್ಲದೇ, ಮುಂದಿನ ದಿನಗಳಲ್ಲಿ ಸಮಸ್ಯೆಗಳ ಪರಿಹಾರ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಾಯಿ ಗಾಂವ್ಕರ್, ಬ್ಲಾಕ್ ಅಧ್ಯಕ್ಷರಾದ ಹೊನ್ನಪ್ಪ ನಾಯಕ, ಪ್ರಮುಖರಾದ ವಿ ಎಲ್ ನಾಯ್ಕ, ವೆಂಕಟ್ರಮಣ ಗೌಡ, ನಾರಾಯಣ ಗೌಡ, ನಾಗಮ್ಮ ಅಗೇರ್, ಶಶಿಕಾಂತ ನಾಯ್ಕ, ಗಣಪತಿ ಹರಿಕಾಂತ, ಸಾವಿತ್ರಿ ಪಟಗಾರ, ಶಂಕರ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.