ಕುಮಟಾ : ಅಭಿವೃದ್ಧಿ ಹಾಗೂ ಉತ್ತಮ ಆಡಳಿತವನ್ನು ಜನರು ಗಮನಿಸುತ್ತಿದ್ದಾರೆ. ಹೀಗಾಗಿ ಬೇರೆ ಬೇರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅಪಾರ ಜನ ಬೆಂಬಲದೊಂದಿಗೆ ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರಲಿದ್ದು, ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಲಿದೆ ಎಂದು ಕುಮಟಾ ಹೊನ್ನಾವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹೇಳಿದರು ಅವರು ಯಲವಳ್ಳಿ ಕೆಳಗಿನಕೇರಿಯಲ್ಲಿ ಗಣೇಶ ಭಂಡಾರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಲವಾರು ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಜನರನ್ನು ಉದ್ದೇಶಿಸಿ ಮಾತನಾಡಿದರು.

RELATED ARTICLES  ನುಡಿದಂತೆ ನಡೆದರೆ ಮಾನವೀಯ ಮೌಲ್ಯಗಳಿಗೆ ಬೆಲೆ: ಡಾ|| ಎಮ್.ಆರ್.ನಾಯಕ

ಅಭಿವೃದ್ಧಿ ನಿರಂತರವಾಗಿ ಇರಬೇಕು ಹಾಗೂ ಜನರ ಕಷ್ಟಕ್ಕೆ ಸ್ಪಂದಿಸುವ ಸರ್ಕಾರ ಆಡಳಿತ ನಡೆಸಬೇಕೆಂಬುದು ಜನರ ಇಚ್ಚೆ ಹೀಗಾಗಿ ಬಿಜೆಪಿಗೆ ಜನ ಬೆಂಬಲ ಹೆಚ್ಚುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹರಿಶ್ಚಂದ್ರ ಮರಾಠಿ, ಈಶ್ವರ ನಾರಾಯಣ ಆಗೇರ, ವಿಕಾಸ ಕೃಷ್ಣ ಮರಾಠಿ, ವಿನಯ ಮರಾಠಿ, ಹರ್ಷ ಮರಾಠಿ, ವಿನಾಯಕ ಆರ್. ಹೆಗಡೆ ಸೇರಿದಂತೆ ಇನ್ನೂ ಅನೇಕರು ಭಾರತೀಯ ಜನತಾ ಪಾರ್ಟಿಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದರು. ಕುಮಟಾ ಮಂಡಲ ಬಿಜೆಪಿ ಅಧ್ಯಕ್ಷ ಹೇಮಂತಕುಮಾರ ಗಾಂವಕರ ಹಾಗೂ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಪಕ್ಷದ ಶಾಲುಹೊದೆಸುವ ಮೂಲಕ ಎಲ್ಲರನ್ನು ಸ್ವಾಗತಿಸಿ, ಪಕ್ಷಕ್ಕೆ ಬರಮಾಡಿಕೊಂಡರು.

RELATED ARTICLES  ಪ ಪೂ ಶ್ರೀ ಶ್ರೀ ವಿಜಯಸಿದ್ಧೇಶ್ವರ ಸ್ವಾಮೀಜಿಯವರಿಗೆ ಗೋಕರ್ಣ ಗೌರವ

ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಜಿಲ್ಲಾ ಪ್ರಮುಖರಾದ ಗಜಾನನ ಗುನಗಾ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಮಹೇಶ ನಾಯಕ ದೇವರಬಾವಿ, ಅಲ್ಪಸಂಖ್ಯಾತ ಮೋರ್ಚಾದ ಮಂಡಲ ಅಧ್ಯಕ್ಷ ಬಾಳಾ ಡಿಸೋಜ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗಜಾನನ ಪೈ, ಬೂತ್ ಅಧ್ಯಕ್ಷ ಕೆ. ಪಿ. ಹೆಗಡೆ, ಗ್ರಾಮಪಂಚಾಯತ್ ಉಪಾಧ್ಯಕ್ಷೆ ಸೀತಾ ಭಟ್ ಹಾಗೂ ಸದಸ್ಯರಾದ ಈಶ್ವರ ಮರಾಠಿ, ಮಂಜುನಾಥ ಮರಾಠಿ ಉಪಸ್ಥಿತರಿದ್ದರು.