ಶಿರಸಿ: ವಿಧಾನಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಮತಯಾಚನೆ ಭರದಿಂದ ಸಾಗುತ್ತಿದೆ. ಅಭ್ಯರ್ಥಿಗಳ ಪರವಾಗಿ ರಾಜಕೀಯ ಮುಖಂಡರ ಜೊತೆ ಸಿನಿ ತಾರೆಯರೂ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಪ್ರಚಾರಕ್ಕಿಳಿಯುತ್ತಿದ್ದಾರೆ. ಅಂತೆಯೇ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ಶಿವರಾಜ್ ಕುಮಾರ್ ಬೆಂಬಲ ಸೂಚಿಸಿದ್ದು, ಮೇ.4 ಗುರುವಾರದಂದು ಕ್ಷೇತ್ರಕ್ಕೆ ಆಗಮಿಸಿ ಭೀಮಣ್ಣ ನಾಯ್ಕ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಕಾರು ಅಪಘಾತ : ಜೆಡಿಎಸ್ ಜಿಲ್ಲಾಧ್ಯಕ್ಷ ಗಂಭೀರ

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುಟುಂಬದ ಕಾರಣಕ್ಕೆ ಭೀಮಣ್ಣ ನಾಯ್ಕ ಕುಟುಂಬಕ್ಕೆ ಸಂಬಂಧಿಗಳಾಗಿರುವ ಡಾ. ರಾಜಕುಮಾರ ಬಳಗ, ಭೀಮಣ್ಣ ನಾಯ್ಕರೊಂದಿಗೆ ತೀರಾ ಹತ್ತಿರದ ಸಂಬಂಧವನ್ನು ಹೊಂದಿದ್ದಾರೆ. ಕಲ ತಿಂಗಳುಗಳ ಹಿಂದೆ ನಡೆದ ಭೀಮಣ್ಣ ನಾಯ್ಕ ಮಗನಾದ ಅಶ್ವಿನ್ ನಾಯ್ಕ ಮದುವೆ ಸಂದರ್ಭದಲ್ಲಿಯೂ ಸಹ ಶಿರಸಿಗೆ ಆಗಮಿಸಿದ್ದು ಉಲ್ಲೇಖನೀಯ. ಜೊತೆಗೆ ಇದೀಗ ಶಿವರಾಜಕುಮಾರ್ ಮಡದಿ ಗೀತಾ ಶಿವರಾಜಕುಮಾರ್ ಸಹ ಇತ್ತಿಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.

RELATED ARTICLES  ದೇವರ ಎತ್ತುಗಳ ಬಗ್ಗೆ ಏನಾದರು ಗೊತ್ತಾ.? ಇಲ್ಲಿದೆ ನೋಡಿ ಮಾಹಿತಿ.