ಕುಮಟಾ: ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ, ಕುಮಟಾ ತಾಲೂಕಿನ ದೀವಗಿ, ಅಳಕೋಡ ಗ್ರಾ.ಪಂ ವ್ಯಾಪ್ತಿಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಸೂರಜ್ ನಾಯ್ಕ ಸೋನಿಯವರಿಗೆ ಉತ್ತಮವಾದ ಬೆಂಬಲ ವ್ಯಕ್ತವಾಯಿತು. ವಿವಿಧ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಅವರು ಪರೇಶ ಮೆಸ್ತಾ ಸಾವಿನ ಘಟನೆಯಲ್ಲಿ ಹೋರಾಟ ಮಾಡಿದ ಅನೇಕ ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಕೋಡಿಸುವಂತಹ ಕೆಲಸ ಮಾಡುತ್ತೇನೆ. ಕುಮಟಾ ಕ್ಷೇತ್ರದಲ್ಲಿ ಬಿಜೆಪಿಯು ಸಂಘಟನೆಯು ಇಲ್ಲದಂತಹ ವೇಳೆಯಲ್ಲಿ ನಾನೇ ಹೋರಾಟ ಮಾಡಿ ಪಕ್ಷವನ್ನು ಸಂಘಟನೆ ಮಾಡಿದ್ದೇನೆ, ಆದರೆ ಬೇರೆ ಪಕ್ಷದಿಂದ ಚುನಾವಣೆಯ ವೇಳೆಯಲ್ಲಿ ಬಂದ ಅಭ್ಯರ್ಥಿಗೆ ಟಿಕೇಟ್ ಕೊಟ್ಟಾಗ, ನನ್ನ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಅಲ್ಲಿಂದ ಹೋರಬಂದೆ, ಆ ವೇಳೆಯಲ್ಲಿ ಬಿಜೆಪಿಯ ಪಕ್ಷದ ವರಿಷ್ಠರಿಗೆ ನನಗೆ ಟಿಕೆಟ್ ಕೋಡಿ ಅಂತ ಕೇಳಿಲ್ಲ, ಪಕ್ಷ ಸಂಘಟನೆ ಮಾಡಿ ದುಡಿದ ಕಾರ್ಯಕರ್ತರಿಗೆ ನೀಡಿದೆ ಎಂದು ಹೇಳಿದೆ. ಎಂದ ಅವರು ಬಿಜೆಪಿಯ ಹಾಗೂ ಕಾಂಗ್ರೆಸ ಪಕ್ಷದ ಅಭ್ಯರ್ಥಿಗಳು ಹಣವನ್ನು ಹಂಚಿ ಮತ ಪಡೆಯಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದಾರೆ ಎಂದರು.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ರಾಜು ಮಾಸ್ತಿಹಳ್ಳ ಮಾತನಾಡಿ, ಸೂರಜ್ ನಾಯ್ಕ ಸೋನಿಯವರಿಗೆ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಿಂದ ಮೋಸವಾಗಿದೆ. ನಮ್ಮ ಕಷ್ಟ, ನೋವು ನಲಿವಿನ ಜೋತೆಯಲ್ಲಿ ಇರುವಂತಹ ವ್ಯಕ್ತಿತ್ವ, ಎಲ್ಲಾ ಜಾತಿ, ಧರ್ಮದ ಜನತೆಯನ್ನು ಒಂದೇ ರೀತಿಯಿಂದ ಪ್ರೀತಿ, ವಿಶ್ವಾಸದಿಂದ ಕಾಣುವಂತಹ, ಕ್ಷೇತ್ರದ ಬಗ್ಗೆ ಅಭಿವೃದ್ದಿ ಪರ ಚಿಂತನೆಯುಳ್ಳ ಸೂರಜ್ ನಾಯ್ಕ ಸೋನಿಯನ್ನು ನಾವೆಲ್ಲರೂ ಆಯ್ಕೆ ಮಾಡಿದ್ರೆ, ಜನಸಾಮಾನ್ಯರ ಶಾಸಕರಾಗಿ ಇರುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಅಳಕೋಡ ಗ್ರಾ.ಪಂ ಸದಸ್ಯರಾದ ದೀಪಕ ನಾಯ್ಕ ಮಾತನಾಡಿ, ಚಂದಾವರದ ಹನುಮಂತ ದೇವರ ಪಲ್ಲಕ್ಕಿ ಮೇರವಣಿಗೆಯ ಜಾಗದಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಟ ಮಾಡಿದ ವೇಳೆಯಲ್ಲಿ ನಮ್ಮ ಮೇಲೆ ಹೊನ್ನಾವರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು ನಾವು ಮಾಡಿದ ಹೋರಾಟ ಫಲದಿಂದ ಬಿಜೆಪಿಯು ರಾಜಕೀಯ ಲಾಭ ಮಾಡಿಕೊಂಡಿದೆ. ಆದರೆ ಆ ವೇಳೆಯಲ್ಲಿ ಹೋರಾಟ ಮಾಡಿದ ಹೋರಾಟಗಾರರಿಗೆ ಜಾಮೀನು ಸಿಗದೆ ಪರದಾಡುವಂತಹ ಸ್ಥಿತಿಯಲ್ಲಿದ್ದಾಗ, ೪೮ ಜನರಿಗೆ ವಯಕ್ತಿಕವಾಗಿ ಜಾಮೀನು ನೀಡಿದ ವ್ಯಕ್ತಿ ಸೂರಜ್ ನಾಯ್ಕ ಸೋನಿಯವರು, ಇಂತಹವರಿಗೆ ಅಧಿಕಾರ ನೀಡಿದ್ರೆ ಕ್ಷೇತ್ರದ ಅಭಿವೃದ್ದಿಯ ಜೋತೆ ಅಮಾಯಕರ ಮೇಲೆ ಪ್ರಕರಣ ದಾಖಲಾಗಿ ಕೋರ್ಟಗೆ ಅಲೆಡಾಡುವ ಯುವಕರಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಹೇಂದ್ರ ನಾಯ್ಕ, ದೀಪಾ ಹರಿಕಾಂತ್ರ, ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.