ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯ ಪರ್ವ ಯಶಸ್ವಿಯಾಗಿ ಮುಂದುವರೆದಿದೆ. ಇಂದು ಹೊನ್ನಾವರ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಅನೇಕ ಯುವಕರು ಕಮಲ ಪಾಳಯವನ್ನು ಪ್ರವೇಶಿಸಿದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹಾಗೂ ಹೊನ್ನಾವರ ಮಂಡಲಾಧ್ಯಕ್ಷ ರಾಜು ಭಂಡಾರಿ ಅವರು ಬಿಜೆಪಿಯ ಶಾಲುಹೊದೆಸುವ ಮೂಲಕ ಮೀನುಗಾರ ಸಮಾಜದ ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ಗಣಪತಿ ಮೇಸ್ತ, ಹನುಮಂತ ಮೇಸ್ತ, ನಾರಾಯಣ ಮೇಸ್ತ, ಸಂತೋಷ ಮೇಸ್ತ, ಸುಧಾಕರ ಮೇಸ್ತ, ಕೃಷ್ಣ ಮೇಸ್ತ, ಸೂರಜ್ ಮೇಸ್ತ, ಆದಿತ್ಯ ಮೇಸ್ತ, ಸತೀಶ್ ಮೇಸ್ತ ಹಾಗೂ ಇನ್ನೂ ಅನೇಕರು ಈ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಪ. ಪಂ. ಉಪಾಧ್ಯಕ್ಷೆ ನಿಶಾ ಶೇಟ್, ಮಾವಿನಕುರ್ವಾ ಗ್ರಾ. ಪಂ. ಅಧ್ಯಕ್ಷ ಜಿ. ಜಿ. ಶಂಕರ್, ನ್ಯಾಯವಾದಿ ಎಸ್. ಜಿ. ಹೆಗಡೆ, ಪ. ಪಂ. ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ, ಪಕ್ಷದ ಪ್ರಮುಖರಾದ ಉಮೇಶ ಸಾರಂಗ, ದತ್ತಾತ್ರೇಯ ಮೇಸ್ತ, ವಿಜು ಕಾಮತ್, ಪೂರ್ಣಿಮಾ ಮಡಿವಾಳ ಶ್ರೀಕಾಂತ್ ಮೊಗೇರ ಮತ್ತಿತರರು ಉಪಸ್ಥಿತರಿದ್ದರು.