ಕಾರವಾರ: ಅಣಶಿ ಘಾಟ್’ನಲ್ಲಿ ಭಾರೀ ಗಾತ್ರದ ಕಂಟೇನರ್ ಒಂದು ಚಾಲಕನ ನಿಯಂತ್ರಣಕ್ಕೆ ಸಿಗದೇ ಕಂಟೇನರ್ ಒಂದು ಬದಿ ಮೇಲಕ್ಕೆ ನೆಗೆದು ನಿಂತಿದ್ದರ ಪರಿಣಾಮ ಮೂರ್ನಾಲ್ಕು ತಾಸುಗಳ ಕಾಲ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಘಟ್ಟದ ತಿರುವಿನಲ್ಲಿ ಕಂಟೇನರ್ ವಾಹನವನ್ನು ತಿರುಗಿಸುವ ಸಮಯದಲ್ಲಿ ಚಾಲಕನಿಗೆ ನಿಯಂತ್ರಣಕ್ಕೆ ಸಿಗದ, ಕಂಟೇನರ್’ನ ಒಂದು ಪಾರ್ಶ್ವ ಮೇಲೆದ್ದು ನಿಂತಿತ್ತು.ಇದರಿಂದ ರಸ್ತೆ ಸಂಚಾರ ಸಾಧ್ಯವಾಗದೇ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಂತರ ಜೆಸಿಬಿ, ಕ್ರೇನ್ ಸಹಾಯದಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.