ಚಿಕ್ಕಮಗಳೂರು: ಕಾಂಗ್ರೆಸ್ ನಿನ್ನೆ ತನ್ನ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಭಜರಂಗದಳ ನಿಷೇಧದ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ಕುರಿತು ‘ಉಗ್ರರು, ದೇಶಭಕ್ತರನ್ನ ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ಚಿಕ್ಕಮಗಳೂರು ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೆ ದಿನಗಳು ಬಾಕಿಯಿದ್ದು, ಉಭಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿದೆ. ಅದರಂತೆ ಕಾಂಗ್ರೆಸ್ ನಿನ್ನೆ ತನ್ನ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದು, ಭಜರಂಗದಳ ನಿಷೇಧದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಕುರಿತು ‘ ಕಾಂಗ್ರೆಸ್ಗೆ ತಾಲಿಬಾನಿಗಳಿಗೂ ರಾಷ್ಟ್ರಭಕ್ತರಿಗೂ ವ್ಯತ್ಯಾಸ ಗೊತ್ತಿಲ್ಲ. ಇದು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನ, ‘ಉಗ್ರರು, ದೇಶಭಕ್ತರನ್ನು ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES  ನಾಳೆ ಉತ್ತರಕನ್ನಡದಲ್ಲಿ ಅತೀ ಹೆಚ್ಚು ಕೊರೋನಾ ಲಸಿಕೆ‌ ಲಭ್ಯ

ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಮಾಡ್ತೀವಿ ಎಂಬ ವಿಚಾರ ಕುರಿತು ಮಾತನಾಡಿದ ಶಾಸಕ ಸಿ.ಟಿ.ರವಿ ‘ಈ ರೀತಿಯ ಕಾಂಗ್ರೆಸ್ ಪಕ್ಷದ ಮನಸ್ಥಿತಿಗೆ ನನ್ನ ಧಿಕ್ಕಾರ. ಇದು ಹನುಮಾನ್ ನಾಡು, ಇಲ್ಲಿ ಹನುಮನನ್ನ ಆರಾಧಿಸುವಂತ ಭಜರಂಗದಳವನ್ನ, ಈ ದೇಶಭಕ್ತಿ ಸಂಘಟನೆಯನ್ನ ಬ್ಯಾನ್ ಮಾಡಲು ಹೊರಟಿದ್ದೀರಾ, ನಿಮ್ಮ ಆಟ ನಡೆಯುವುದಿಲ್ಲ. ಜನ ನಿಮ್ಮನ್ನ ಬ್ಯಾನ್ ಮಾಡುತ್ತಾರೆ. ಆ ಕಾಲ ದೂರ ಇಲ್ಲ.ಈಗ ಭಜರಂಗದಳವನ್ನ ಬ್ಯಾನ್ ಮಾಡ್ತೀರಾ, ಮುಂದೆ ಹನುಮ ಜಯಂತಿಯನ್ನ ಬ್ಯಾನ್ ಮಾಡುತ್ತಿರಾ. ನಿಮ್ಮ ಮಾನಸಿಕ ಸ್ಥಿತಿ, ಓಲೈಕೆಯ ಪರಮಾವಧಿ ಎಂದರು.ಇದು ಪಾಕಿಸ್ತಾನವನ್ನ, ತಾಲಿಬಾನಿಗಳನ್ನ ಮೀರಿಸಿದ ಮಾನಸಿಕತೆ ಕಾಂಗ್ರೆಸ್ದ್ದು, ಭಯೋತ್ಪಾದಕರ ಮೇಲೆ ದಾಳಿ ಮಾಡಿದ ಸೈನಿಕರನ್ನು ಕೋರ್ಟ್ ಮಾರ್ಷಲ್ಗೆ ಒಳಪಡಿಸಿದ್ರಿ. ದೇಶಭಕ್ತರನ್ನ, ದೇಶದ್ರೋಹಿಗಳನ್ನು ಒಂದೇ ತಕಡಿಯಲ್ಲಿ ತೂಗುವುದು ನಿಮ್ಮ ಮಾನಸಿಕತೆ. ನಿಮ್ಮ ಕಾಂಗ್ರೆಸ್ ಮುಗಿದು ಹೋಗಬಹುದೇ ಹೊರತು ಭಜರಂಗದಳ ಮುಗಿಸಲಾಗುವುದಿಲ್ಲ. ಹಿಂದೆ ಇದೇ ತರ ಮಾತನಾಡಿದ್ದವರು ಕಳೆದು ಹೋಗಿದ್ದಾರೆ. ನೀವು ರಾಜಕೀಯವಾಗಿ ಮುಗಿದು ಹೋಗ್ತೀರಾ, ಇದಕ್ಕೆ ದೊಡ್ಡಬೆಲೆ ತೆರಬೇಕಾಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ‌ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.

RELATED ARTICLES  ಸರಣಿ ಬಾಂಬ್ ಸ್ಫೋಟಕ್ಕೆ ಸಂಚು : 10 ಮಂದಿ ಶಂಕಿತ ಐಸಿಸ್ ಉಗ್ರರ ಬಂಧನ.