ಯಲ್ಲಾಪುರ: ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಅಪಘಾತಕ್ಕೀಡಾಗಿ ಜರ್ಮನ್ ನಾಗರಿಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 63ರ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.
ಜರ್ಮನ್, ವಾರ್ನೆಮುಂಡೆ, ಬ್ರಾಮ್‌ಸ್ಟೆಡ್ ನಿವಾಸಿ ಕ್ರಿಶ್ಚಿಯನ್ ನ್ಯೂಬೌರ್ (43) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತನ್ನ ಬೈಕನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಸವಾರಿ ಮಾಡಿಕೊಂಡು ಪಟ್ಟಣ ವ್ಯಾಪ್ತಿಯ ನವದುರ್ಗ ಗ್ಯಾರೇಜ್ ಪಕ್ಕದ ತಗ್ಗಿನಲ್ಲಿದ್ದ ಬಿದ್ದ ಮರಕ್ಕೆ ಡಿಕ್ಕಿ ಹೊಡೆದು ತಲೆ, ಎದೆ ಹಾಗೂ ಕೈಗಳಿಗೆ ತೀವ್ರ ಗಾಯಪಡಿಸಿಕೊಂಡಿದ್ದನು. ತೀವ್ರ ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಎಫ್.ಪಿ.ಎ.ಐ. ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ಕೋವಿಡ್ 19 ಪರಿಹಾರ ನಿಧಿಗೆ ದೇಣಿಗೆ