ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರು ಇಂದು ಹೊನ್ನಾವರ ತಾಲೂಕಿನ ಚಂದಾವರ ಶಕ್ತಿಕೇಂದ್ರದ ತಲಗೆರೆಯಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿಯವರು ಬಿಜೆಪಿ ಆಡಳಿತದ ಅವಧಿಯಲ್ಲಿ ಚಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೆರವೇರಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಅಭಿವೃದ್ಧಿಯ ಜೊತೆಗೆ ಆರೋಗ್ಯಕರ ಹಾಗೂ ಶಾಂತಿಯುತ ಸಮಾಜದ ನಿರ್ಮಾಣಮಾಡಿದ್ದು ನಮ್ಮ ಸಾಧನೆಯಾಗಿದೆ. ಕಾಂಗ್ರೆಸ್ ಆಡಳಿತವಿರುವಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದ ಪರಿಣಾಮ ಜನಜೀವನ ಕಷ್ಟದಲ್ಲಿದ್ದದ್ದನ್ನು ಈ ಭಾಗದ ಜನರು ಇಂದಿಗೂ ಮರೆತಿಲ್ಲ. ಆದರೆ ನಮ್ಮ ಅವಧಿಯಲ್ಲಿ ಜನರು ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಧ್ಯೇಯ ವಾಕ್ಯ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಇದರಂತೆಯೇ ಎಲ್ಲರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ ಎಂದು ಹೇಳಿದರು.

RELATED ARTICLES  51 ಚೀಲದಲ್ಲಿ ಸಾಗಿಸುತ್ತಿದ್ದ 186 ಲೀ. ಗೋವಾ ಮದ್ಯ ಪೂಲೀಸರ ಬಲೆಗೆ!

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಚುನಾವಣಾ ಪ್ರಭಾರಿ ಎಮ್. ಜಿ. ಭಟ್, ಮುಗ್ವಾ ಮಹಾಶಕ್ತಿಕೇಂದ್ರದ ಅಧ್ಯಕ್ಷ ರವಿ ಹೆಗಡೆ, ಚಂದಾವರ ಪಂಚಾಯತ್ ಅಧ್ಯಕ್ಷೆ ಛಾಯಾ ಉಭಯಕರ, ಶಕ್ತಿಕೇಂದ್ರದ ಪ್ರಮುಖರಾದ ಮಂಜುನಾಥ ಮಡಿವಾಳ ಹಾಗೂ ಎಮ್. ಎಸ್. ನಾಯ್ಕ, ಹೆಗಡೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ಯೋಗೇಶ ಪಟಗಾರ, ಬೂತ್ ಅಧ್ಯಕ್ಷ ವಾಸು ಗೌಡ, ಪಕ್ಷದ ಪ್ರಮುಖರಾದ ಕೃಷ್ಣ ಗೌಡ ಕಡ್ನೀರು, ಕುಮಾರ ಕವರಿ ಮತ್ತಿತರರು ಹಾಜರಿದ್ದರು.

RELATED ARTICLES  ರಾಮಕೃಷ್ಣ ಹೆಗಡೆಯವರು ಸಮಾಜದ ಕಟ್ಟಕಡೆಯ ವ್ಯಕ್ತಿ ಮಾಡುವ ಕೆಲಸವನ್ನೂ ಗೌರವದಿಂದ ನೋಡುವಂತಹ ನಿರಹಂಕಾರಿ ಆಗಿದ್ದವರು