ಕುಮಟಾ : ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮನೆಮನೆ ಪ್ರಚಾರ ಹಾಗೂ ಕಾರ್ಯಕರ್ತರ ಸಭೆಗಳು, ಬೃಹತ್ ಸಮಾವೇಶಗಳು ಒಂದರ ಮೇಲೊಂದರಂತೆ ನಡೆಯುತ್ತಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿ ಪರ ಮುಖಂಡರುಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಕಳೆದರೆಡು ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡಿರುವ ಶಿವಾನಂದ ಹೆಗಡೆ ಕಡತೋಕಾ ಇದೀಗ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಈ ಹಿಂದೆ ತಮ್ಮ ಜಿ.ಪಂ ಕ್ಷೇತ್ರ ಹಾಗೂ ತಮ್ಮ ಪ್ರಬಲವಾದ ರಾಜಕೀಯ ಹಿಡಿತ ಹೊಂದಿರುವ ಹಳದಿಪುರ ಭಾಗದ ಅನೇಕ ಮನೆಗಳಿಗೆ ಭೇಟಿ ನೀಡಿದ ಶಿವಾನಂದ ಹೆಗಡೆ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬುತ್ತಿದ್ದಾರೆ. ಶಿವಾನಂದ ಹೆಗಡೆಯವರ ಆಗಮನದಿಂದ ಯಾವುದೇ ಚುನಾವಣಾ ಪ್ರಚಾರ ಅಥವಾ ಚುನಾವಣೆ ಚಿಂತನೆಯಲ್ಲಿ ತೊಡಗಿಕೊಳ್ಳದ ಅನೇಕ ಕಾರ್ಯಕರ್ತರು ಹಾಗೂ ಹಾಲಕ್ಕಿ ಮತ್ತು ಹವ್ಯಕ ಸಮಾಜದ ಅನೇಕ ಜನರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ನಿರೀಕ್ಷೆ ಇದೆ.

RELATED ARTICLES  ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಶಿವಾನಂದ ಹೆಗಡೆಯವರ ಜೊತೆಗೆ, ಬಿಜೆಪಿ ಹಿರಿಯ ಮುಖಂಡರಾದ ವಿನೋದಪ್ರಭು, ಬಿಜೆಪಿಯ ಮುಖಂಡ ಸುಬ್ರಾಯ ವಾಳ್ಕೆ, ಚಿದಾನಂದ ಭಂಡಾರಿ, ವಿಶು ನಾಯ್ಕ, ನವೀನ ನಾಯ್ಕ, ಶಿವಾನಂದ ನಾಯ್ಕ, ಗಣಪತಿ ನಾಯ್ಕ, ಶ್ರೀಕಾಂತ ಮೊಗೇರ, ಗುರುನಾಥ ಗೌಡ ಇನ್ನಿತರರು ಗ್ರಾ.ಪಂ ಸದಸ್ಯ ಗೋವಿಂದ ಜೋಶಿ ಮನೆಗೆ ಭೇಟಿನೀಡಿ ಪಕ್ಷದ ಕುರಿತಾಗಿ ಸಕ್ರಿಯವಾಗಿ ಕಾರ್ಯ ಮಾಡುವಂತೆ ವಿನಂತಿಸಿದ್ದಾರೆ.

RELATED ARTICLES  ವಿವೇಕನಗರ ವಿಕಾಸ ಸಂಘ ಕುಮಟಾದ ಸಂಯೋಜನೆಯಲ್ಲಿ ಅಕ್ಟೋಬರ್ 7 ರಂದು ಪೌರಾಣಿಕ ಯಕ್ಷಗಾನ-ಭೀಷ್ಮವಿಜಯ

ಈ ಸಂದರ್ಭದಲ್ಲಿ ಅನೇಕ ಶಿವಾನಂದ ಹೆಗಡೆ ಜೊತೆಗೆ ಎಲ್ಲಾ ಮುಖಂಡರು ಗ್ರಾಮದ ಕೆಲ ಜನರನ್ನು ಭೇಟಿ ಮಾಡಿ ಬಿಜೆಪಿ ಪಕ್ಷದ ಕುರಿತಾಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡಿದ್ದಾರೆ. ಶಿವಾನಂದ ಹೆಗಡೆಯವರ ಸಕ್ರಿಯ ತೊಡಗಿಕೊಳ್ಳುವಿಕೆಯ ಮೂಲಕ ದಿನಕರ ಶೆಟ್ಟಿ ಅವರಿಗೆ ಇನ್ನೂ ಹೆಚ್ಚಿನ ಬಲ ಬಂದಂತಾಗಿದೆ.