ಕುಮಟಾ : ಅಭಿವೃದ್ಧಿಯ ಜೊತೆಗೆ ಆರೋಗ್ಯಕರ ಹಾಗೂ ಶಾಂತಿಯುತ ಸಮಾಜದ ನಿರ್ಮಾಣಮಾಡಿದ್ದು ನಮ್ಮ ಸಾಧನೆಯಾಗಿದೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹೇಳಿದರು ಅವರು ಗುರುವಾರ ಚಂದಾವರ ಶಕ್ತಿಕೇಂದ್ರದ ತಲಗೆರೆಯಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.

ಕಾಂಗ್ರೆಸ್ ಆಡಳಿತವಿರುವಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದ ಪರಿಣಾಮ ಜನಜೀವನ ಕಷ್ಟದಲ್ಲಿದ್ದದ್ದನ್ನು ಈ ಭಾಗದ ಜನರು ಇಂದಿಗೂ ಮರೆತಿಲ್ಲ. ಆದರೆ ನಮ್ಮ ಅವಧಿಯಲ್ಲಿ ಜನರು ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಧ್ಯೇಯ ವಾಕ್ಯ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಇದರಂತೆಯೇ ಎಲ್ಲರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ ಎಂದು ಹೇಳಿದರು.

RELATED ARTICLES  ನೀರಿನ ಟ್ಯಾಂಕಿನಲ್ಲಿ ಬಿದ್ದ ಎರಡು ಆಕಳುಗಳ ರಕ್ಷಣೆ.

ಬಿಜೆಪಿ ಆಡಳಿತದ ಅವಧಿಯಲ್ಲಿ ಚಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೆರವೇರಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದ ಅವರು, ಚಂದಾವರದ ವಾತಾವರಣ ಪ್ರಕ್ಷುಬ್ಧ ಗೊಳಿಸಲು ಇತರ ಪಕ್ಷದ ಪ್ರಮುಖರೇ ಮುಂದಾಗಿದ್ದ ಸಂದರ್ಭದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣಮಾಡಿ, ಅಭಿವೃದ್ಧಿಯ ಕಾರ್ಯಕ್ಕೆ ಮುಂದಾದದ್ದರಿಂದ ಈ ಪ್ರದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದರು.

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಚುನಾವಣಾ ಪ್ರಭಾರಿ ಎಮ್. ಜಿ. ಭಟ್ಟ ಮಾತನಾಡಿ, ಇಲ್ಲಿಯ ಜನರು ಪ್ರಬುದ್ಧರು. ಕೇವಲ ಭರವಸೆ ಆಶ್ವಾಸನೆ ನಂಬಿ ಮೋಸ ಹೋಗುವವರಲ್ಲ. ಅಭಿವೃದ್ಧಿಯ ಹಿಂದಿರುವ ಜನರಿವರಾದ ಕಾರಣ ಬಿಜೆಪಿ ಬೆಂಬಲಿಸುತ್ತಾರೆಂಬ ನಂಬಿಕೆ ನಮ್ಮದು ಎಂದರು.

RELATED ARTICLES  ಟಿಪ್ಪು ಜಯಂತಿಗೆ ನನ್ನ ಹೆಸರು ಹಾಕಬೇಡಿ ಎಂದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ

ಮುಗ್ವಾ ಮಹಾಶಕ್ತಿಕೇಂದ್ರದ ಅಧ್ಯಕ್ಷ ರವಿ ಹೆಗಡೆ, ಚಂದಾವರ ಪಂಚಾಯತ್ ಅಧ್ಯಕ್ಷೆ ಛಾಯಾ ಉಭಯಕರ, ಶಕ್ತಿಕೇಂದ್ರದ ಪ್ರಮುಖರಾದ ಮಂಜುನಾಥ ಮಡಿವಾಳ ಹಾಗೂ ಎಮ್. ಎಸ್. ನಾಯ್ಕ, ಹೆಗಡೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ಯೋಗೇಶ ಪಟಗಾರ, ಬೂತ್ ಅಧ್ಯಕ್ಷ ವಾಸು ಗೌಡ, ಪಕ್ಷದ ಪ್ರಮುಖರಾದ ಕೃಷ್ಣ ಗೌಡ ಕಡ್ನೀರು, ಕುಮಾರ ಕವರಿ ಮತ್ತಿತರರು ಹಾಜರಿದ್ದರು.