ಕುಮಟಾ : ನಾನು ಶಾಸಕನಾದ ನಂತರ ಗೂಂಡಾಗಿರಿ ಎನ್ನುವುದು ಎಲ್ಲಿಯೂ ತಲೆಎತ್ತದಂತೆ ತಡೆದಿದ್ದೇನೆ. ಅಭಿವೃದ್ಧಿ ಎಷ್ಟು ಮುಖ್ಯವೊ ಪ್ರಜೆಗಳು ನೆಮ್ಮದಿಯಿಂದ ಹಾಗೂ ನಿರಾತಂಕವಾಗಿ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಅಷ್ಟೇ ಮುಖ್ಯ. ಈ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಮತ್ತೊಮ್ಮೆ ಬಿಜೆಪಿಗೆ ಎಲ್ಲರೂ ಮತನೀಡಬೇಕೆಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹೇಳಿದರು. ಅವರು ಇಂದು ತಾಲೂಕಿನ ಚಂದಾವರ ಶಕ್ತಿಕೇಂದ್ರದ ಕಡ್ನೀರು ಗ್ರಾಮದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಮಾನವಾಗಿ ಶ್ರಮಿಸಿದೆ. ಭಾರತೀಯ ಜನತಾ ಪಾರ್ಟಿ ಆಡಳಿತಕ್ಕೆ ಬಂದನಂತರ ಚಂದಾವರ ಸಂತೆಗುಳಿ ರಸ್ತೆ, ಚಂದಾವರ ಅರೆಅಂಗಡಿ ರಸ್ತೆ, ತೆಂಬ್ರಿ ಸೇತುವೆ ಸೇರಿದಂತೆ ಇನ್ನೂ ಅನೇಕ ಕಾಮಗಾರಿಗಳಿಗೆ ಅನುದಾನ ಒದಗಿಸಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಚಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೆರವೇರಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ನಮ್ಮ ಆಡಳಿತಾವಧಿಯ ಪ್ರಾರಂಭದಲ್ಲಿ ಅನಿರೀಕ್ಷಿತವಾಗಿ ತಲೆದೋರಿದ ಕೊರೋನಾ ಹಾಗೂ ಪ್ರವಾಹದಂತಹ ಸಂಕಷ್ಟದ ನಡುವೆಯೂ ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯಲ್ಲಿ ಕೊರತೆ ಉಂಟಾಗದಂತೆ ಸಮರ್ಥವಾಗಿ ಆಡಳಿತ ನಿರ್ವಹಿಸಿದೆ. ಶಿಕ್ಷಣ, ಆರೋಗ್ಯ, ರಸ್ತೆ, ಸೇತುವೆ, ಕುಡಿಯುವ ನೀರು ಈ ಎಲ್ಲಾ ಸೌಕರ್ಯಗಳಿಗೆ ಅತಿಹೆಚ್ಚು ಅನುದಾನವನ್ನು ಒದಗಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 1,800ಕೋಟಿಗೂ ಅಧಿಕ ಅನುದಾನ ನೀಡಿದ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಲು, ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮೆಲ್ಲರ ಅಮೂಲ್ಯವಾದ ಮತವು ಕಮಲದ ಗುರುತಿಗೆ ಮೀಸಲಿರಲಿ ಎಂದು ಹೇಳಿದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಚುನಾವಣಾ ಪ್ರಭಾರಿ ಎಮ್. ಜಿ. ಭಟ್, ವಾಸ್ಕೊ ಶಾಸಕರಾದ ಕೃಷ್ಣ ದಾಜಿ ಸಾಲ್ಕರ್, ಮುಗ್ವಾ ಮಹಾಶಕ್ತಿಕೇಂದ್ರದ ಅಧ್ಯಕ್ಷ ರವಿ ಹೆಗಡೆ, ಚಂದಾವರ ಪಂಚಾಯತ್ ಅಧ್ಯಕ್ಷೆ ಛಾಯಾ ಉಭಯಕರ, ಸಾಲ್ಕೋಡ್ ಗ್ರಾಮಪಂಚಾಯತ್ ಅಧ್ಯಕ್ಷೆ ರಜನಿ ನಾಯ್ಕ, ಶಕ್ತಿಕೇಂದ್ರದ ಪ್ರಮುಖರಾದ ಮಂಜುನಾಥ ಮಡಿವಾಳ ಹಾಗೂ ಎಮ್. ಎಸ್. ನಾಯ್ಕ, ಬೂತ್ ಅಧ್ಯಕ್ಷ ದಯಾ ದೇಶಭಂಡಾರಿ, ಪಂಚಾಯತ್ ಸದಸ್ಯರಾದ ಮಲ್ಲಿಕಾ ಭಂಡಾರಿ, ಗಣಪಿ ಮುಕ್ರಿ, ಅಶ್ವಿನಿ ನಾಯ್ಕ್, ಹುದಾ ಶೇಖ್, ಪಕ್ಷದ ಪ್ರಮುಖರಾದ ಮಾರುತಿ ಪ್ರಭು, ಗಿರೀಶ್ ನಾಯ್ಕ್, ಉಲ್ಲಾಸ್ ಕಾಮತ್, ಕೃಷ್ಣ ಗೌಡ ಕಡ್ನೀರು, ರಾಜು ನಾಯ್ಕ್