ಕುಮಟಾ : ಗೋಕರ್ಣದ ಮೂಡಂಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಪರ ಕ್ಷೇತ್ರದ ಮೀನುಗಾರರೆಲ್ಲರನ್ನೂ ಒಳಗೊಂಡು ಮತಯಾಚನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಬಿರುಸಿನಿಂದ ಜರುಗಿತು. ಅನೇಕ ಗ್ರಾಮಗಳಿಂದ ಮೀನುಗಾರರು ಆಗಮಿಸಿ ಜೆಡಿಎಸ್ ಪಕ್ಷದ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದರು.

ಅನೇಕ ವರ್ಷಗಳಿಂದ ಸೀನಿಯವರು ಮೀನುಗಾರರ ಪರವಾಗಿ ನಡೆಸಿದ ಹೋರಾಟಕ್ಕೆ ಜನರು ಪ್ರೀತಿಯ ಗೌರವವನ್ನು ನೀಡಿದರು. ಫೆಡರೇಷನ್ ಹಾಗೂ ಮೀನುಗಾರಿಕಾ ಸೊಸೈಟಿ ತದಡಿಯ ನಿರ್ದೇಶಕರಾದ ಮಹೇಶ ಮೂಡಂಗಿ,ತದಡಿ ಮೀನುಗಾರಿಕಾ ಅಸೋಸಿಯೇಷನ್ ಅಧ್ಯಕ್ಷರಾದ ಉಮಾಕಾಂತ ಹೊಸ್ಕಟ್ಟಾ,ತದಡಿ ನಾಡದೋಣಿಯ ಯೂನಿಯನ್ ಅಧ್ಯಕ್ಷರಾದ ಜಗದೀಶ್ ತಾಂಡೇಲ್, ಮೀನು ವ್ಯಾಪಾರಸ್ಥರಾದ ದಾಮೋದರ ಮೂಡಂಗಿ, ವನ್ಯಜೀವಿ ರಕ್ಷಕರಾದ ಅಶೋಕ ನಾಯ್ಕ್, ಗೋಕರ್ಣ ಪಂಚಾಯತ್ ಸದಸ್ಯರಾದ ಪದ್ಮ ಅಶೋಕ್ ನಾಯ್ಕ್, ಸುರಕ್ಷಾ ಪೇತಾಳ್ಕರ್, ಸುಧಾಕರ್ ಕಿಮಾನಿ, ನಾಗರಾಜ ಕಿಮಾನಿ, ಶಂಕರ್ ಮೆಕಾನಿಕ್, ಹಾಗೂ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

RELATED ARTICLES  ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಸಿಸಿಟಿವಿ ಕಡ್ಡಾಯ: ಜಿಲ್ಲಾಧಿಕಾರಿ ಹರೀಶ್‍ಕುಮಾರ್ ಸೂಚನೆ!!

ಆ ಸಂದರ್ಭದಲ್ಲಿ ಕುಮಟಾ ಜೆಡಿಎಸ್ ತಾಲೂಕ ಅಧ್ಯಕ್ಷರಾದ ಸಿ ಜಿ ಹೆಗಡೆ, ಜೆಡಿಎಸ್ ಜಿಲ್ಲಾ ಮೀನುಗಾರರ ಅಧ್ಯಕ್ಷರಾದ ಚಿನ್ನ ಅಂಬಿಗ, ಮಾಜಿ ತಾಲೂಕ ಪಂಚಾಯತ್ ಉಪಾಧ್ಯಕ್ಷರಾದ ಈಶ್ವರ್ ನಾಯ್ಕ್, ಜೆಡಿಎಸ್ ತಾಲೂಕಾ ಕಾರ್ಯಾಧ್ಯಕ್ಷರಾದ ಬಲಿಂದ್ರ ಗೌಡ, ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾದ ದತ್ತಾ ಪಟಗಾರ ಹಾಗೂ ಇನ್ನುಳಿದ ಗಣ್ಯರು ಉಪಸ್ಥಿತರಿದ್ದರು.

RELATED ARTICLES  ಭಟ್ಕಳಿಗರಿಗೆ ಇಂದು ಸ್ವಲ್ಪ ನಿಟ್ಟುಸಿರು ಬಿಡುವ ವರದಿ : ಕೊರೋನಾ ಅಟ್ಟಹಾಸಕ್ಕೆ ಬಿತ್ತಾ ಬ್ರೇಕ್..?