ಕುಮಟಾ : ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಕಡೆಗೆ ಜನತೆಯ ಒಲವು ಹೆಚ್ಚಾಗಿದ್ದು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಬೆಂಬಲಿಸುವುದಾಗಿ ಭರವಸೆ ನೀಡಿದರು.

ಕುಮಟಾ ಹೊನ್ನಾವರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕರ್ನಾಟಕ ಮುಸ್ಲಿಂ ಜಮಾಯತ್‌ನ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಆದ ಇಮಾಮ್ ಗಣಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಇದರ ಜೊತೆಗೆ ಸಹಕಾರಿ ಸೇವಾ ಸಮಿತಿಯ ಸದಸ್ಯರು ಹಾಗೂ ಸಾಮಾಜಿಕ ಕಳಕಳಿಯ ಹೋರಾಟಗಾರರಾದ ಗಣೇಶ್ ನಾಯ್ಕ, ಯುವ ಮುಖಂಡರಾದ ಸಯ್ಯದ್ ಹಸನ್ ಅಣ್ಣಿಗೇರಿ, ಯುವ ಉದ್ಯಮಿಗಳಾದ ವಸೀಂ ಇಬ್ರಾಹಿಂ ಶೇಖ್, ಸಮಾಜ ಸೇವಕರಾದ ಮುದಾಸಿರ್ ಗಣಿ, ಯುವ ಮುಖಂಡರಾದ ಕಿರಣ್ ಬಾಡ್‌ಕರ್, ಜೆಡಿಎಸ್‌ನ ಮಾಜಿ ರಾಜ್ಯ ಕಾರ್ಯದರ್ಶಿಗಳು ಹಾಗೂ ವಿಎಸ್‌ಎಸ್ ನ ನಿರ್ದೇಶಕರು ಆದ ಜಿ.ಎನ್ ಗೌಡ, ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿಗಳು ಆದ ಡಾ. ಎಸ್.ಡಿ ಹೆಗಡೆ, ಕೆಎಸ್‌ಆರ್‌ಟಿಸಿಯ ನಿವೃತ್ತ ನೌಕರರಾದ ಪ್ರಭಾಕರ ಮಾಸ್ತಿ ಪಟಗಾರ, ಹೊನ್ನಾವರದ ಸಿಟಿ ಸೆಂಟರ್ ಮಾಲೀಕರು ಹಾಗೂ ಯುವ ಉದ್ಯಮಿಗಳಾದ ಬಾಬಾ ಪಕಿ ಮಸ್ತಾನ, ಜನಪರ ಹೋರಾಟಗಳ ಸಂಘಟಕರಾದ ಗಿರೀಶ ರಾಯ್ಕರ್, ಯುವ ಮುಖಂಡರಾದ ಶ್ರವಣ ರಾಯ್ಕರ್ ಸೇರಿದಂತೆ ಅನೇಕ ಯುವಕರು, ಸಮಾಜ ಸೇವಕರು, ಸಮುದಾಯಗಳ ಮುಖಂಡರುಗಳು ಕಾಂಗ್ರೆಸ್ ಕೈ ಹಿಡಿದಿದ್ದಾರೆ.

RELATED ARTICLES  ಕುಮಟಾದಲ್ಲೂ ಲಭ್ಯ ದಾವಣಗೆರೆ ಸ್ಪೆಶಲ್ ಬೆಣ್ಣೆ ದೋಸೆ

ನೂತನವಾಗಿ ಪಕ್ಷ ಸೇರ್ಪಡೆಯಾದ ಎಲ್ಲರನ್ನು ಪಕ್ಷದ ಬಾವುಟ ನೀಡಿ ಶಾಲುಹರಿಸಿ ಬರಮಾಡಿಕೊಳ್ಳಲಾಯಿತು. ಇವರೆಲ್ಲರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿನ ಅಂತರ ದುಪ್ಪಟ್ಟಾಗಲಿದೆ ಎಂದು ಅಭ್ಯರ್ಥಿ ನಿವೇದಿತ್ ಆಳ್ವಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES  ಹಸಿದು ಅಸುನೀಗಿದವರ ಮನೆಗೆ ತೆರಳಿದ ಶಾಸಕರು.