ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಇಂದು ಕುಮಟಾ ತಾಲೂಕಿನ ಕೋಣಾರೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಜನರನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿಯವರು, 2014ರಲ್ಲಿ ಮೋದೀಜಿ ಪ್ರಧಾನಿಯಾದ ನಂತರ ನಮ್ಮ ದೇಶ ಪ್ರಗತಿಯ ಪಥದಲ್ಲಿ ದಾಪುಗಾಲಿಡುತ್ತಿದೆ. ಮೊದಲು ಭಾರತೀಯರನ್ನು ಕಡೆಗಣನೆ ಮಾಡುತ್ತಿದ್ದವರು ಇಂದು ವಿದೇಶದಲ್ಲಿರುವ ಭಾರತೀಯರಿಗೆ ವಿಶೇಷ ಗೌರವ ನೀಡುತ್ತಿದ್ದಾರೆ. ಕಾಶ್ಮೀರ ಬೇಕು ಎನ್ನುತ್ತಿದ್ದ ಪಾಕಿಸ್ತಾನ ಇಂದು ಹೊಟ್ಟೆಗೆ ಸ್ವಲ್ಪ ಗೋಧಿಕೊಡಿ ಸಾಕು ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಇದು ಮೋದೀಜಿಯವರ ನಾಯಕತ್ವದ ಪ್ರಭಾವ. ಆದರೆ ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದ ಪರಿಣಾಮ ಇಂದು ಮತದಾರರು ಕಾಂಗ್ರೆಸ್ ಪಕ್ಷವನ್ನು ದೇಶದೆಲ್ಲೆಡೆ ತಿರಸ್ಕರಿಸುತ್ತಿದ್ದಾರೆ. ರಾಜ್ಯದಲ್ಲಿಯೂಕೂಡ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅತ್ಯುತ್ತಮ ಆಡಳಿತ ನೀಡಿದ್ದೇವೆ. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಮತ್ತೊಮ್ಮೆ ಆಶೀರ್ವಾದ ಮಾಡಬೇಕೆಂದು ಕೋರಿದರು.

RELATED ARTICLES  ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದ ದಿನಕರ‌ ಶೆಟ್ಟಿ.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಕೆ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕರು ಆಗಿರುವ ಶಿವಾನಂದ ಹೆಗಡೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಪ್ರತಿಯೊಂದು ಹಂತಗಳಲ್ಲಿಯೂ ತಪ್ಪುಹೆಜ್ಜೆ ಇಡುವಮೂಲಕ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಅಲ್ಲಿ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವವರಿಗೆ ಬೆಲೆಯಿಲ್ಲ. ಕಾರ್ಯಕರ್ತರ ಭಾವನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೆಲವರ ಓಲೈಕೆಯನ್ನೇ ಮುಖ್ಯ ಕಾಯಕ ಮಾಡಿಕೊಂಡಿರುವ ಕಾಂಗ್ರೆಸ್ಸಿನ ಇಂದಿನ ಸ್ಥಿತಿಯನ್ನು ನೋಡಿದರೆ, ಬಿಜೆಪಿಯನ್ನು ಎದುರಿಸುವ ಕಿಂಚಿತ್ ಸಾಮರ್ಥ್ಯವು ಅವರಲ್ಲಿ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿ ಅಭ್ಯರ್ಥಿಯಾಗಿರುವ ದಿನಕರ ಶೆಟ್ಟಿಯವರು ಮಾಡಿರುವ ಜನಪರ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆಮಾಡೋಣ ಎಂದು ಹೇಳಿದರು.

RELATED ARTICLES  ಉಮೇಶ ಭಟ್ಟ ಮೇರು ವ್ಯಕ್ತಿತ್ವದ ಮಾನವತಾವಾದಿಯಾಗಿದ್ದರು - ಡಾ. ಶ್ರೀಪಾದ ಶೆಟ್ಟಿ

ಕುಮಟಾ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ. ಐ. ಹೆಗಡೆ, ಗ್ರಾ. ಪಂ. ಉಪಾಧ್ಯಕ್ಷೆ ಭಾರತಿ ನಾಯ್ಕ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಮಧುಸೂದನ ಹೆಗಡೆ, ಎಸ್. ಎಸ್. ಭಟ್, ರಾಧಾಕೃಷ್ಣ ಗೌಡ, ವಿ. ಎಸ್. ಹೆಗಡೆ, ಭಾಸ್ಕರ ಚಂದಾವರ, ಕೆ. ಎನ್. ಭಟ್, ರಾಜಾರಾಮ ಭಟ್, ಪಂಚಾಯತ್ ಸದಸ್ಯರಾದ ಆರ್. ವಿ. ಹೆಗಡೆ, ಕಮಲಾ ಭಟ್, ಹರ್ಷ ಹೆಗಡೆ, ಶ್ರೀಧರ ಹೆಗಡೆ, ಪುರಸಭಾ ಸದಸ್ಯ ತುಳಸು ಗೌಡ, ಶಕ್ತಿಕೇಂದ್ರದ ಪ್ರಮುಖರಾದ ದಿನೇಶ ಭಟ್ ಹಾಗೂ ಗೋಪಾಲಕೃಷ್ಣ ಹೆಗಡೆ, ಬೂತ್ ಅಧ್ಯಕ್ಷರು, ಪಕ್ಷದ ಅಭಿಮಾನಿಗಳು ಇದ್ದರು.