ಚುನಾವಣಾ ಪ್ರಚಾರದ ಅಂಗವಾಗಿಇಂದು ಕುಮಟಾದ ಗಾಂಧಿ ಚೌಕ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಆರ್ ವಿ ದೇಶಪಾಂಡೆಯವರು ಭಾಗಿಯಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರಮುಖ ಭರವಸೆಗಳು ಹಾಗೂ ಕ್ಷೇತ್ರದ ಪ್ರಮುಖ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳು ಇನ್ನು ಮುಂತಾದ ವಿಚಾರಗಳ ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಜಾರಿಯಾಗದೆ ಬರೀ ಭ್ರಷ್ಟಾಚಾರವನ್ನೇ ನೋಡಿ ಬೇಸತ್ತಿರುವ ಜನರಿಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಗಳು ಮತ್ತು ಅಭಿವೃದ್ಧಿಪರ ಆಡಳಿತ ಮತ್ತೆ ಬೇಕೆನಿಸುತ್ತಿದೆ. ಜನರಿಗಿರುವ ಕಾಂಗ್ರೆಸ್ ಪರವಾದ ಒಲವು ಈ ಬಾರಿ ಕುಮಟಾ – ಹೊನ್ನಾವರ ಕ್ಷೇತ್ರದಲ್ಲಿ ಶ್ರೀ ನಿವೇದಿತ್ ಆಳ್ವಾ ಇವರನ್ನು ಗರಿಷ್ಠ ಮತಗಳ ಅಂತರದಿಂದ ಈ ಕ್ಷೇತ್ರದಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಿದರು.
ಹಾಗೆಯೇ ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದಂತೆ ಎಂದು ಹೇಳಿದರು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ನಿವೇದಿತ್ ಆಳ್ವಾ ಇವರನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಸಭೆಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ನಿವೇದಿತ್ ಆಳ್ವಾ, ಜಿಲ್ಲಾ ಅಧ್ಯಕ್ಷರಾದ ಸಾಯಿ ಗಾಂಕರ್, ಬ್ಲಾಕ್ ಅಧ್ಯಕ್ಷರಾದ ಹೊನ್ನಪ್ಪ ನಾಯಕ್, ಪ್ರಚಾರ ಸಮಿತಿಯ ಅಧ್ಯಕ್ಷರಾದ ಜೆ ಡಿ ನಾಯ್ಕ್, ಭುವನ ಭಾಗವತ್, ಆರ್ ಎಚ್ ನಾಯ್ಕ್, ಮಧುಸೂಧನ್ ಶೇಟ್, ನಾಗೇಶ್ ನಾಯ್ಕ್, ವಿ ಎಲ್ ನಾಯ್ಕ್, ನಾಗರಾಜ್ ನಾಯ್ಕ್, ಎಂ ಟಿ ನಾಯ್ಕ್, ಧೀರೂ ಶಾನಬಾಗ್, ಮಹಿಳಾ ಅಧ್ಯಕ್ಷರಾದ ಸುರೇಖಾ ವಾರೇಕರ್, ತಾರಾ ಗೌಡ, ವೀಣಾ ನಾಯ್ಕ್, ಮುಂತಾದವರು ಉಪಸ್ಥಿತರಿದ್ದರು.
ಈ ಸಭೆಗೂ ಮೊದಲು ಜಿ ಎಸ್ ಬಿ ಸಮಾಜದ ಮುಖಂಡರ ಸಭೆ ನಡೆಯಿತು. ಈ ಸಭೆಯಲ್ಲಿ ಸಮಾಜದ ಪ್ರಮುಖರಾದ ಮುರಳೀಧರ ಪ್ರಭು, ಧೀರೂ ಶಾನಬಾಗ, ಅಜಿತ ಭಟ್, ಪಾಂಡುರಂಗ ಕಾಮತ, ಅತುಲ್ ಕಾಮತ, ಸುಧಾಕರ ನಾಯಕ, ಅನಂತ ಶಾನಬಾಗ, ರಾಮಕೃಷ್ಣ ಗೊಳಿ, ರಾಜು ಶಾನಬಾಗ್ ಮುಂತಾದವರು ಉಪಸ್ಥಿತರಿದ್ದರು.