ಕುಮಟಾ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಸೂರಜ್ ನಾಯ್ಕ ಸೋನಿಯ ವಿರುದ್ದ ಅಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಲು ಷಡ್ಯಂತ್ರ ನಡೆಯುತ್ತಿದೆ ಎಂದು ಕ್ಷೇತ್ರದಾದ್ಯಂತ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ. ಎಪ್ರೀಲ್ ೩೦ ರಂದು ಕುಮಟಾದ ಹೊಸ ಬಸ್ ನಿಲ್ದಾಣದ ಎದುರು ರಾತ್ರಿಯ ವೇಳೆಯಲ್ಲಿ ವ್ಯಕ್ತಿಯೋರ್ವನು ಕಾಂಗ್ರೆಸ್ ಪಕ್ಷದ ಪ್ರಚಾರದ ವಾಹನಕ್ಕೆ ರಸ್ತೆಯಲ್ಲಿ ಅಡ್ಡ, ಗಟ್ಟಿ ನೀವು ಎಲ್ಲಿಂದಲೋ ಬಂದು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಿರಿ, ನಾನು ಜೆಡಿಎಸ್ ಕಾರ್ಯಕರ್ತ ಎಂದು ಹೇಳಿ ಕಾಂಗ್ರೆಸ್ ಪ್ರಚಾರದ ವಾಹನದ ಚಾಲಕನಿಗೆ ಧಮ್ಕಿ ಹಾಕಿ, ನೀವು ಸೂರಜ್ ನಾಯ್ಕ ಸೋನಿಗೆ ಓಟು ಹಾಕಬೇಕು ಎಂದು ಹೇಳಿ ಅವಾಚ್ಚ ಶಬ್ದಗಳಿಂದ ಬೈದು ಕಾಂಗ್ರೆಸ್ ಪ್ರಚಾರದ ವಾಹನದ ಡ್ರೈವರ್‌ಗೆ ಹೊಡೆದಿದ್ದಾನೆ ಎಂದು ಸುದ್ದಿ ಹರಿದಾಡಿದೆ. ಅಲ್ಲೆ ಸಮೀಪದ ದೂರದಲ್ಲಿ ಇದ್ದ ಸಾರ್ವಜನಿಕರು ಅಲ್ಲಿ ಏನೋ ಗಲಾಟೆ ನಡೆಯುತ್ತಿದೆ ಎಂದು ಗಮನಿಸಿ ಸ್ಥಳಕ್ಕೆ ಬಂದು, ಯಾಕೆ ಅವರಿಗೆ ಹೊಡೆಯುತ್ತಿದ್ದಿಯಾ ಎಂದಾಗ, ನಾನು ಸೂರಜ್ ನಾಯ್ಕ ಸೋನಿ ಪಕ್ಕದ ಮನೆಯವನು ಎಂದು ಸುಳ್ಳು ಹೇಳಿದಾನೆ ಎನ್ನಲಾಗಿದೆ. ಈ ಘಟನೆಯ ಬಗ್ಗೆ ಸೂರಜ್ ನಾಯ್ಕ ಸೋನಿಯವರಿಗೆ ಸ್ಥಳದಲ್ಲಿದ್ದ ಸಾರ್ವಜನಿಕರು ವಿಷಯ ಮುಟ್ಟಿಸಿದ್ದಾರೆ. ಘಟನೆ ನಡೆದು ೪ ರಿಂದ ೫ ದಿನದ ನಂತರ ಕುಮಟಾಕ್ಕೆ ಆಗಮಿಸಿದ ವೇಳೆ ಅವನು ಗುರುತು ಹಿಡಿದ ಜೆಡಿಎಸ್ ಕಾರ್ಯಕರ್ತರು, ಇಂತಹ ತೇಜೋವಧೆ ಮಾಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವಂತಹ ವ್ಯಕ್ತಿಗೆ ಪೋಲಿಸರು ವಿಚಾರಣೆ ನಡೆಸಿ ಸತ್ಯಾಸತ್ಯತೆಯನ್ನು ಹೊರಬರಬೇಕೆಂದು ಪೋಲಿಸ್ ಠಾಣೆಗೆ ಕರೆದೊಯ್ದಲಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿಯಾದ ಸೂರಜ್ ನಾಯ್ಕ ಸೋನಿ , ನನ್ನ ಹೆಸರನ್ನು ಹಾಳು ಮಾಡಬೇಕೆಂದು ಷಡ್ಯಂತ್ರ ನಡೆಸಲಾಗುತ್ತಿದೆ. ಈ ವ್ಯಕ್ತಿ ಯಾರು ಅಂತ ನನಗೆ ಗೊತ್ತಿಲ್ಲ. ಜನರಲ್ಲಿ ನನ್ನ ಬಗ್ಗೆ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಒಳ್ಳೆಯ ವಾತಾರವಣ, ಜನರಲ್ಲಿ ಗೊಂದಲ ಮೂಡಿಸಲು ಇಂತಹ ರಾಜಕೀಯ ಷಡ್ಯಂತ್ರಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತವಾದ ತನಿಖೆಯಾಗಬೇಕು ಎಂದು ಹೇಳಿದರು.
ಒಟ್ಟಿನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸೂರಜ್ ನಾಯ್ಕ ಸೋನಿಯವರಿಗೆ ಕಾರ್ಯಕರ್ತರಿಂದ ಹಾಗೂ ಜನರಿಂದ ಸಿಗುತ್ತಿರುವ ಸ್ಪಂದನೆಯನ್ನು ಸಹಿಸದೆ ಇಂತಹ ಅಪ್ರಚಾರದಲ್ಲಿ ತೊಡಗಿದ್ದಾರೆ, ಆದರೆ ತನ್ನ ಬಗ್ಗೆ ಅಪ್ರಚಾರ ಮಾಡಿದ ವ್ಯಕ್ತಿಗೆ ಮಾನವೀಯತೆಯ ದೃಷ್ಠಿಯಿಂದ ದೂರು ದಾಖಲಿಸದೆ ಆತನಿಂದ ಮುಚ್ಚಳಿಕೆಯ ಪತ್ರವನ್ನು ಬರೆಸಿಕೊಂಡು ಕಳುಹಿಸಲಾಗಿದೆ ಎನ್ನಲಾಗಿದೆ.