ಕುಮಟಾ : ತಾಲೂಕಿನ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಗೋಕರ್ಣದ ಪಟ್ಟಣ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನೇತೃತ್ವದಲ್ಲಿ ಪಥ ಸಂಚಲನದ ಮೂಲಕ ಮತಯಾಚನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವು ಬಿರುಸಿನಿಂದ ಜರುಗಿತು.
ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ರಾಜೀವ್ ಮಂಜುನಾಥ್ ಗೌಡ, ಅಳಕೋಡ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹುಲಿಯಮ್ಮ ಗಂಗು ಗೌಡ, ಉಪ್ಪಿನ ಪಟ್ಟಣ ಊರಿನ ಗೌಡರಾದ ಗಜಾನನ ಗಂಗು ಗೌಡ, ಹರಿಶ್ಚಂದ್ರ ಗೌಡ ಕತಗಾಲ, ಈಶ್ವರ ಗೌಡ ಕತಗಾಲ, ಮಂಜುನಾಥ ಗೌಡ ಕಬ್ಬರ್ಗಿ, ಸುರೇಶ ಕುಪ್ಪಗೌಡ ಬೈಲಿಗದ್ದೆ ಹಾಗೂ ನೂರಾರು ಜನರು ಉತ್ತಮ ಬೆಂಬಲವನ್ನು ಸೂಚಿಸುವುದರ ಮೂಲಕ ಪಕ್ಷಕ್ಕೆ ಸೇರ್ಪಡೆಯಾದರು.
ಆ ಸಂದರ್ಭದಲ್ಲಿ ಜೆಡಿಎಸ್ ಕುಮಟಾ ತಾಲೂಕ ಅಧ್ಯಕ್ಷರಾದ ಸಿ ಜಿ ಹೆಗಡೆ, ಮಾಜಿ ತಾಲೂಕ ಪಂಚಾಯತ್ ಉಪಾಧ್ಯಕ್ಷರಾದ ಈಶ್ವರ ನಾಯ್ಕ್, ಜೆಡಿಎಸ್ ಕುಮಟಾ ತಾಲೂಕ ಕಾರ್ಯಾಧ್ಯಕ್ಷರಾದ ಬಲಿಂದ್ರ ಗೌಡ, ಪ್ರಧಾನ ಕಾರ್ಯದರ್ಶಿಯಾದ ದತ್ತಾ ಪಟಗಾರ, ಜೆಡಿಎಸ್ ಮೀನುಗಾರರ ಜಿಲ್ಲಾಧ್ಯಕ್ಷರಾದ ಚಿನ್ನು ಅಂಬಿಗ, ತದಡಿ ಮೀನುಗಾರರ ಅಸೋಸಿಯೇಷನ್ ಅಧ್ಯಕ್ಷರಾದ ಉಮಾಕಾಂತ್ ಹೊಸ್ಕಟ್ಟ, ಮೀನುಗಾರಿಕಾ ಸೊಸೈಟಿ ತದಡಿಯ ನಿರ್ದೇಶಕರಾದ ಮಹೇಶ್ ಮೂಡಂಗಿ, ಮಹೇಂದ್ರ ನಾಯ್ಕ್ ಕತಗಾಲ,ರಾಜು ಮಾಸ್ತಿಹಳ್ಳ,ರಾಘು ಅಂಬಿಗ,ದೀಪಕ್ ನಾಯ್ಕ್,ಮಂಜು ಹೆಬ್ಬೈಲ್ ಉಪಸ್ಥಿತರಿದ್ದರು.