ಸಿದ್ದಾಪುರ : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ರವರು ಸಿರಸಿಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರವಾಗಿ ಚುನಾವಣೆ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದರು. ಶಿವಣ್ಣನ ಡೈಲಾಗ್ ಹಾಡಿಗೆ ಅಭಿಮಾನಿಗಳು ಸಿಳ್ಳೆ ಚಪ್ಪಾಳೆಯೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

RELATED ARTICLES  ರಸ್ತೆ ಬಂದ್ ಆದೇಶ ವಾಪಸ್ ಪಡೆದ ಜಿಲ್ಲಾಧಿಕಾರಿ.

ಇದೇ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ ಯಾವುದೇ ಕೆಲಸವನ್ನಾದರೂ ಮನಸ್ಸಿನಿಂದ ಮಾಡಬೇಕು ಯಾರನ್ನು ಆರಿಸಬೇಕಾದರೂ ಮನಸ್ಸಿನಿಂದ ಆರಿಸಬೇಕು ಭೀಮಣ್ಣನವರು ಓರ್ವ ಒಳ್ಳೆಯ ವ್ಯಕ್ತಿ ಅವರ ಒಳ್ಳೆಯತನಕ್ಕೆ ನಾನು ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದರು.

RELATED ARTICLES  ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ

ಇಂದಿನ ಈ ಕಾರ್ಯಕ್ರಮದಲ್ಲಿ ಸೇರಿದ ಎಲ್ಲರಲ್ಲೂ ನಗುಮುಖ ಕಾಣುತ್ತಿದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣನವರನ್ನು ಆಯ್ಕೆ ಮಾಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.