ಭಟ್ಕಳ: ಅತೀ ವೇಗವಾಗ ಹಾಗೂ ಅಜಾಗರುಕತೆಯಿಂದ ಚಲಿಸಿಕೊಂಡು ಬಂದ ಕಾರೊಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ 11 ವರ್ಷ ಬಾಲಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಜಾಲಿ ರಸ್ತೆಯ ಅಜಾದ್ ನಗರ 6 ನೇ ಕ್ರಾಸ್ ನಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಬಾಲಕನನ್ನು ಜುಹೇಮ್ (11) ಎಂದು ಗುರುತಿಸಲಾಗಿದೆ. ಭಟ್ಕಳ ರಾಷ್ಟ್ರೀಯ ಹೆದ್ದಾರಿ-66ರ ಕಡೆಯಿಂದ ಭಟ್ಕಳದ ಜಾಲಿ ಬೀಚ್ ಕಡೆಗೆ ಅತೀ ವೇಗ ಹಾಗೂ ಅಜಾಗೂರುಕತೆ ಯಿಂದ ಚಲಾಯಿಸಿಕೊಂಡು ಬಂದು ಕಾರೊಂದು ಭಟ್ಕಳದ ರಿಬ್ಕೋ ಕಾಲೋನಿಯಿಂದ ಅಜಾದ ನಗರ ೪ ನೇ ಕ್ರಾಸ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಆಟೋ ರೀಕ್ಷಾದಲ್ಲಿದ್ದ 11 ವರ್ಷದ ಬಾಲಕ ಜುಹೇಮ ಜಮೀಲ್ ಈತನಿಗೆ ಗಂಭೀರವಾಗಿ ಗಾಯವಾಗಿದ್ದು ತಕ್ಷಣ ಭಟ್ಕಳದ ಲೈಪ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮದ್ಯದಲ್ಲಿ ಸಾವನಪ್ಪಿದ್ದಾನೆ .
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ