ಕುಮಟಾ : ಮೀನುಗಾರ ಸಮಾಜದ ಮುಖಂಡ ಮೋಹನ ಮೂಡಂಗಿ ಅವರ ನೇತೃತ್ವದಲ್ಲಿ, ಮೀನುಗಾರರ ಸಹಕಾರಿ ಸಂಘ ತದಡಿ ಇದರ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡರು ಆಗಿರುವ ಪ್ರದೀಪ್ ನಾಗಪ್ಪ ಬಾಂದೆಕರ ತದಡಿ ಹಾಗೂ ಭಗಾವನ್ ಪಾಂಡುರಂಗ ರೆಡ್ಕರ ತದಡಿ ಅವರು ಹಾರುಮಾಸ್ಕೇರಿಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಪಕ್ಷದ ಶಾಲುಹೊದೆಸುವ ಮೂಲಕ ಬಿಜೆಪಿಗೆ ಬರಮಾಡಿಕೊಂಡರು. ಗೋಕರ್ಣ ಗ್ರಾಮಪಂಚಾಯತ್ ಅಧ್ಯಕ್ಷ ಮಂಜುನಾಥ್ ಜನ್ನು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.