ಹೊನ್ನಾವರ : ಭೂತ ಪಿಶಾಚಿಗಳ ಕಾಟ ನಿವಾರಣೆ ಭಜರಂಗಿಯ ಆರಾಧನೆ ನಾವು ಮಾಡುತ್ತೇವೆ, ಆದರೆ ಕಾಂಗ್ರೆಸ್ ನವರಿಗೆ ಭಜರಂಗಿ ಅಂದ್ರೆ ಯಾಕೆ ಕೋಪ? ಹನುಮಾನ್ ಜಪ ಮಾಡಿದ್ರೆ ಭೂತ ಪಿಶಾಚಿಗಳ ಕಾಟ ನಿವಾರಣೆ ಆಗುತ್ತವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನ್ನು ಭೂತಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೋಲಿಸಿದರು. ಹೊನ್ನಾರವರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕರಾವಳಿಯಲ್ಲಿ ಬಿಜೆಪಿ ಅಭ್ಯರ್ಥಿ ಗಳನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

RELATED ARTICLES  ವ್ಯಕ್ತಿಯ ಗುರುತು ಸಿಕ್ಕರೆ ಮಾಹಿತಿ ನೀಡಲು ವಿನಂತಿ.

ಅಯೋಧ್ಯಾ ರಾಮನ ಊರಿನಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ. ಭಾರತದ ಅಭಿವೃದ್ಧಿ ಸಹಿಸದವರು ಮೋದಿಯವರ ವಿರೋಧ ಮಾಡುತಿದ್ದಾರೆ ಎಂದರು.

ಭಜರಂಗದಳ ನಿಷೇಧ ಮಾಡಿದರೆ, ಪಿಎಫ್‌ಐ
ಐಎಸ್ ಐ ಆಹ್ವಾನ ಮಾಡಿದಂತೆ.ನಾವು ಪಿಎಫ್ ಐ, ಐಎಸ್‌ಐ ಸೊಂಟ ಮುರಿಯುತ್ತೇವೆ ಎಂದರು. ಅಂಜನಾದ್ರಿಯಲ್ಲಿ ಯಡಿಯೂರಪ್ಪ ಬೊಮ್ಮಾಯಿಯವರ ನೇತ್ರತ್ವದಲ್ಲಿ ಹನುಮಾನ್ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಹನುಮಾನ್ ನನ್ನು ಏಕೆ ವಿರೋಧ ಮಾಡುತ್ತಿದೆ.ಉತ್ತರ ಪ್ರದೇಶದ ರಾಮಮಂದಿರದ ಉದ್ಘಾಟನೆಯಲ್ಲಿ ಕರ್ನಾಟಕದವರೂ ಭಾಗಿಯಾಗಬೇಕು. ರಾಮಮಂದಿರದ ಉದ್ಘಾಟನೆಗೆ ನಿಮ್ಮನ್ನು ಆಹ್ವಾನಿಸಲು ಬಂದಿದ್ದೇವೆ ಎನ್ನುವ ಮೂಲಕ ಕೇವಲ ಹತ್ತೆ ನಿಮಿಷ ಭಾಷಣ ಮಾಡಿ ತರಾತುರಿಯಲ್ಲಿ ಹೊರಟರು.

RELATED ARTICLES  ಕುಮಟಾ ಕಾಂಗ್ರೆಸಿಗರ ಒಗ್ಗಟ್ಟೇ ಚುನಾವಣೆಗೆ ಬಹುದೊಡ್ಡ ಬಲ : ಇಲ್ಲ ಸಲ್ಲದ ಸುದ್ದಿ ಹಬ್ಬಿಸಿ ಗೊಂದಲ‌ಸೃಷ್ಟಿ ಯತ್ನ : ನಾವೆಲ್ಲಾ ಒಂದೇ ಎಂದೆಂದ ಕುಮಟಾ ಕಾಂಗ್ರೇಸಿಗರು.

ಯಕ್ಷಗಾನದ ಪಗಡೆ ತೊಡಿಸಿ ಇಡುಗುಂಜಿ ಮಹಾ ಗಣಪತಿಯ ಪ್ರತಿಮೆ ನೀಡಿ ಯೋಗಿ ಆದಿತ್ಯನಾಥ್ ರವರನ್ನು ಸ್ವಾಗತ ಮಾಡಲಾಯಿತು. ಭಟ್ಕಳ ಹೊನ್ನಾವರ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ, ಕುಮಟಾ ಹೊನ್ನಾವರ ಅಭ್ಯರ್ಥಿ ದಿನಕರ ಶೆಟ್ಟಿ ಬಲ ಎಡದಲ್ಲಿ ನಿಂತು ಜನತೆಯ ಬೆಂಬಲಕ್ಕೆ ಮನವಿ ಮಾಡಿದರು. ಬಿಜೆಪಿ ಮುಖಂಡರುಗಳು ಸಭೆಯಲ್ಲಿದ್ದರು.