ಕುಮಟಾ : ಬಿಜೆಪಿಯೇತರ ರಾಜಕೀಯ ಪಕ್ಷದ ಕಾರ್ಯಕರ್ತರು ಚುನಾವಣಾ ಸಂದರ್ಭದಲ್ಲಿ ಮಾತ್ರ ಜನಸಾಮಾನ್ಯರ ಹತ್ತಿರ ಬರುತ್ತಾರೆ, ಆದರೆ ಜನರೊಂದಿಗೆ ಸದಾಕಾಲ ಸಂಪರ್ಕದಲ್ಲಿದ್ದು, ಜನತೆಯ ಕಷ್ಟಸುಖಗಳಲ್ಲಿ ಜೊತೆಗಿರುವ ಗುಣವಿರುವುದು ಭಾರತೀಯ ಜನತಾಪಾರ್ಟಿಯ ಕಾರ್ಯಕರ್ತರಿಗೆ ಮಾತ್ರ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹೇಳಿದರು ಅವರು ವಾಲಗಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಹಾರೋಡಿ ಹಾಗೂ ಕಲ್ಕೆರೆ, ಕೂಜಳ್ಳಿ, ಊರಕೇರಿ ಗ್ರಾಮದ ಅಬ್ಬಿ ಹಾಗೂ ತಲಗೋಡು, ಮೂರೂರಿನ ಕೋಣಾರೆ ಹೊಸಳ್ಳಿ, ಮುಸುಗುಪ್ಪೆ, ಮಂಜುಮನೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿರಬಹುದು ಅಥವಾ ಪ್ರವಾಹಕಾಲದಲ್ಲಿ ಇರಬಹುದು, ಬಿಜೆಪಿ ಕಾರ್ಯಕರ್ತರು ಜನರ ಕುಂದುಕೊರತೆಗಳಿಗೆ ಸ್ಪಂದಿಸುತ್ತಾ, ಸಹಾಯಹಸ್ತವನ್ನು ಚಾಚಿದ್ದು ನಿಮಗೆ ನೆನಪಿರುವ ಸಂಗತಿ. ಆದರೆ ಇಂದು ಕೆಲವರು ನಿಮ್ಮೆದುರು ಬಂದು ಕೈಮುಗಿದು ನಿಂತು ನಮಗೊಂದು ಅವಕಾಶಕೊಡಿ ಎಂದು ಕೇಳುತ್ತಿದ್ದಾರೆ. ತಮ್ಮ ರಾಜಕೀಯ ಲಾಭಕ್ಕೋಸ್ಕರ ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿರುವ ಅವರು ಕಳೆದ ಐದು ವರ್ಷದಲ್ಲಿ ಜನರಿಗೆ ಉಪಯೋಗವಾಗುವ ಯಾವುದೇ ಕೆಲಸವನ್ನು ಮಾಡಿಲ್ಲ. ಅಕಸ್ಮಾತ್ ಅಂತವರ ಮಾತಿಗೆ ನೀವು ಮರುಳಾದರೆ, ಭಸ್ಮಾಸುರನಿಗೆ ವರಕೊಟ್ಟಂತಾಗುತ್ತದೆ. ಕಳೆದ ಐದುವರ್ಷ ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜನರೆಲ್ಲರೂ ಶಾಂತಿಯುತ ಹಾಗೂ ನೆಮ್ಮದಿಯ ಜೀವನಸಾಗಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಿದ್ದೇವೆ ಎಂದರು.

RELATED ARTICLES  ಸಾಲ್ಕಣಿ ಪಂಚಾಯತ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ: ಶಶಿಭೂಷಣ ಹೆಗಡೆಗೆ ಇನ್ನಷ್ಟು ಬಲ

ಕೂಜಳ್ಳಿ ಹಾಗೂ ವಾಲಗಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಐದುವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನೆರವೇರಿವೆ. 50.00ಲಕ್ಷ ರೂ. ವೆಚ್ಚದಲ್ಲಿ ಕೂಜಳ್ಳಿಯಲ್ಲಿ ಭವ್ಯವಾದ ರೈತ ಸಂಪರ್ಕ ಕೇಂದ್ರ ನಿರ್ಮಾಣಗೊಂಡಿದೆ. ಗಿಬ್ ಸರ್ಕಲ್ ನಿಂದ ಸಂತೆಗುಳಿವರೆಗೆ ಅತ್ಯುತ್ತಮವಾದ ರಸ್ತೆ ನಿರ್ಮಾಣವಾಗಿದೆ. ವಾಲಗಳ್ಳಿ ಯಿಂದ ಅಬ್ಬಿ ರಸ್ತೆ 20.00ಲಕ್ಷ, ವಾಲಗಳ್ಳಿಯಿಂದ ಕೋಟೆಗುಡ್ಡೆಗೆ ಹೋಗುವ ರಸ್ತೆ 20.00ಲಕ್ಷ, ಬಲ್ಲಾಳಮಕ್ಕಿ-ಕಲ್ಕೇರಿ ರಸ್ತೆ 3.00ಲಕ್ಷ, ಕಲ್ಕೆರೆ ಕೆರೆಯ ಅಭಿವೃದ್ಧಿಗೆ ಅಮೃತಸರೋವರ ಯೋಜನೆಯಡಿಯಲ್ಲಿ 25.00ಲಕ್ಷ, ವಾಲಗಳ್ಳಿ ಹಾಗೂ ಹಿ. ಪ್ರಾ. ಶಾಲೆಗೆ ಎರಡು ವಿವೇಕ ಕೊಠಡಿಗಳು ಸೇರಿದಂತೆ ಈ ಭಾಗಕ್ಕೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸರ್ಕಾರ ಅನುದಾನವನ್ನು ಒದಗಿಸಿದೆ ಎಂದು ಹೇಳಿದರು.

RELATED ARTICLES  ಸಾಧನೆ ಮಾಡಿದ ಕಾವ್ಯಶ್ರೀ ಕೆರೆಮನೆ.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಕೆ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕರು ಆಗಿರುವ ಶಿವಾನಂದ ಹೆಗಡೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಪ್ರತಿಯೊಂದು ಹಂತಗಳಲ್ಲಿಯೂ ತಪ್ಪುಹೆಜ್ಜೆ ಇಡುವಮೂಲಕ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಅಲ್ಲಿ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವವರಿಗೆ ಬೆಲೆಯಿಲ್ಲ. ಕಾರ್ಯಕರ್ತರ ಭಾವನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೆಲವರ ಓಲೈಕೆಯನ್ನೇ ಮುಖ್ಯ ಕಾಯಕ ಮಾಡಿಕೊಂಡಿರುವ ಕಾಂಗ್ರೆಸ್ಸಿನ ಇಂದಿನ ಸ್ಥಿತಿಯನ್ನು ನೋಡಿದರೆ, ಬಿಜೆಪಿಯನ್ನು ಎದುರಿಸುವ ಕಿಂಚಿತ್ ಸಾಮರ್ಥ್ಯವು ಅವರಲ್ಲಿ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿ ಅಭ್ಯರ್ಥಿಯಾಗಿರುವ ದಿನಕರ ಶೆಟ್ಟಿಯವರು ಮಾಡಿರುವ ಜನಪರ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆಮಾಡೋಣ ಎಂದು ಹೇಳಿದರು.

ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಗೋವಾ ಶಾಸಕರಾದ ಕೃಷ್ಣ ದಾಜಿ ಸಾಲ್ಕರ್, ಕುಮಟಾ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ. ಐ. ಹೆಗಡೆ, ಗ್ರಾ. ಪಂ. ಉಪಾಧ್ಯಕ್ಷೆ ಭಾರತಿ ನಾಯ್ಕ ಇತರರು ಇದ್ದರು.