ಕುಮಟಾ : ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿಂದು ಅನೇಕ ಯುವಕರು ಬಂದು ಕಾಂಗ್ರೆಸ್ ಪಕ್ಷದ ಕುರಿತಾಗಿ ಒಲವು ವ್ಯಕ್ತಪಡಿಸಿ ತಮ್ಮ ಪ್ರಥಮ ಮತ ಸ್ಮರಣೀಯ ಮತ್ತು ಅರ್ಥಪೂರ್ಣವಾಗಲೆಂದು ನಿವೇದಿತ್ ಆಳ್ವಾ ಅವರನ್ನು ಭೇಟಿಮಾಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿವೇದಿತ್ ಆಳ್ವಾ ಅವರು ಮಾತನಾಡಿ ಯುವಮನಸುಗಳಿಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ಯುವ ಜನತೆ ಬದಲಾದರೆ ದೇಶ ಬದಲಾದಂತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಾಯಿ ಗಾಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಶರಾದ ಹೊನ್ನಪ್ಪ ನಾಯಕ್, ಪ್ರಮುಖಾರಾದ ಮಧುಸೂಧನ್ ಶೇಟ್, ಯೋಗೇಶ್ ರೈಕರ್, ಕೆಪಿಸಿಸಿ ಸಂಯೋಜಕರಾದ ನಾಗರಾಜ್ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.