ಹೊನ್ನಾವರ : ಪಟ್ಟಣ ವ್ಯಾಪ್ತಿಯಲ್ಲಿ ಪಥ ಸಂಚಲನದ ಮೂಲಕ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೀನಿ ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಊಹೆಗೂ ಮೀರಿ ಸಾವಿರಾರು ಜನರು ಮತಯಾಚನೆ ಸಂದರ್ಭದಲ್ಲಿ ಉತ್ತಮ ಬೆಂಬಲ ನೀಡಿದರು. ಹೊನ್ನಾವರದ ಜನತೆಯು ತೋರಿದ ಪ್ರೀತಿಯು ನನ್ನ ಇಷ್ಟು ವರ್ಷದ ಹೋರಾಟಕ್ಕೆ ಪ್ರತಿಫಲ ಎನ್ನುವ ರೀತಿಯಲ್ಲಿತ್ತು. ಈ ಬಾರಿ ಹೊನ್ನಾವರ ಕ್ಷೇತ್ರ ಹೊಸತನವನ್ನು ಬಯಸಿ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ನನಗೆ ಶುಭ ಹಾರೈಸಿದೆ. ಸಮಸ್ತ ಕ್ಷೇತ್ರದ ಜನರ ಈ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ನಾನು ಚಿರಋಣಿ ಎಂದರು.
ಆ ಸಂದರ್ಭದಲ್ಲಿ ಹೊನ್ನಾವರ ಜೆಡಿಎಸ್ ತಾಲೂಕ ಅಧ್ಯಕ್ಷರಾದ ಟಿ ಟಿ ನಾಯ್ಕ್,ಕುಮಟ ಜೆಡಿಎಸ್ ತಾಲೂಕ ಅಧ್ಯಕ್ಷರಾದ ಸಿ ಜಿ ಹೆಗಡೆ,ಹೊನ್ನಾವರ ಜೆಡಿಎಸ್ ಕಾರ್ಯಾದಕ್ಷರಾದ ಕೆ ಎಸ್ ಗೌಡ,ಕುಮಟ ಜೆಡಿಎಸ್ ಕುಮಟಾ ಕಾರ್ಯಾದಕ್ಷರಾದ ಬಲೀಂದ್ರ ಗೌಡ,ಪ್ರಧಾನ ಕಾರ್ಯದರ್ಶಿ ದತ್ತಾ ಪಟಗಾರ,ತಾಲೂಕ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಈಶ್ವರ್ ನಾಯ್ಕ್,ಎಸ್ ಜಿ ಹೆಗಡೆ,ಸುದರ್ಶನ್ ಶಾನಭಾಗ್, ದೀಪಾ ಹರಿಕಂತ್ರ,ಪ್ರೇಮ ಮೇಸ್ತ,ಶ್ರೀಪಾದ್ ನಾಯ್ಕ್,ವಿನಾಯಕ್ ಮೇಸ್ತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.