ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ದೇವಗಿರಿ ಗ್ರಾಮಪಂಚಾಯತ್ ವ್ಯಾಪ್ತಿಯ ಮಠಗ್ರಾಮ, ಗುಡಬಳ್ಳಿ, ಕಡೆಕೊಡಿ, ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಕೈಗೊಂಡು ಮತಯಾಚನೆ ಮಾಡಿದರು.
ನಾನು ಅಭಿವೃದ್ಧಿಯ ಪರವಾಗಿ ಕೆಲಸ ಮಾಡಿದ್ದೇನೆ. ಕಳೆದ ಐದುವರ್ಷ ನಿಮ್ಮಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದರಿಂದ ಈಗ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಕಷ್ಟದ ಕಾಲದಲ್ಲಿ ಸಿಗದೇ ಐದು ವರ್ಷಗಳಿಗೊಮ್ಮೆ ಮುಖತೋರಿಸುವವರಿಂದ ಅಭಿವೃದ್ಧಿ ಬಯಸುವುದು ಸಾಧ್ಯವಿಲ್ಲ. ನಾನು ಸದಾಕಾಲ ನಿಮ್ಮ ನಡುವೆ ಇದ್ದು ನಿಮ್ಮ ಕಷ್ಟಗಳಿಗೆ ಸ್ಪಂದಿಸಿದ್ದೆನೆ. ತಾವೆಲ್ಲರೂ ನನಗೆ ಮತ್ತೊಮ್ಮೆ ನಿಮ್ಮ ಸೇವೆಮಾಡುವ ಅವಕಾಶ ನೀಡುತ್ತೀರಿ ಎಂಬ ನಂಬಿಕೆ ಇಂದ ಬಂದಿದ್ದೇನೆ. ತಾವೆಲ್ಲರೂ ಸಹ ಮೋದಿಜಿರವರು ಹೇಳಿದಂತೆ ದಿನಾಂಕ 10/05/2023 ರಂದು ಜೈ ಭಜರಂಗಬಲಿ ಎಂದು ಭಾರತೀಯ ಜನತಾ ಪಕ್ಷದ ಚಿಹ್ನೆಯಾದ ಕಮಲದ ಗುರುತಿಗೆ ಮತ ನೀಡಿ ನನ್ನನ್ನು ಪ್ರಚಂಡ ಬಹುಮತದಿಂದ ಆಯ್ಕೆಮಾಡಬೇಕೆಂದು ಕೋರಿಕೊಂಡರು.
ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಮಹಾಶಕ್ತಿಕೇಂದ್ರದ ಅಧ್ಯಕ್ಷ ಕುಮಾರ ಭಟ್, ಗೋವಾ ಶಾಸಕರಾದ ಕೃಷ್ಣ ದಾಜಿ ಸಾಲ್ಕರ್, ಶಕ್ತಿಕೇಂದ್ರದ ಅಧ್ಯಕ್ಷ ಕೃಷ್ಣ ನಾರಾಯಣ ನಾಯ್ಕ, ಪಂಚಾಯತ್ ಉಪಾಧ್ಯಕ್ಷ ಎಸ್. ಟಿ. ನಾಯ್ಕ್, ಬೂತ್ ಅಧ್ಯಕ್ಷರಾದ ಕೇಶವ ಮಡಿವಾಳ, ಉದಯ ಭಂಡಾರಿ, ಹಾಲಕ್ಕಿ ಸಮಾಜದ ಯುವಮುಖಂಡ ಕೃಷ್ಣ ಗೌಡ ಕಡ್ನೀರು, ಪಂಚಾಯತ್ ಸದಸ್ಯರು, ಬೂತ್ ಕಮಿಟಿ ಸದಸ್ಯರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.