ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಐಗಳ ಕುರ್ವೆ, ಕೋಡ್ಕಣಿ ಕ್ರಾಸ್, ಪಡುವಣಿ, ಕಿಮಾಾನಿ ನಾಗೂರ್ ಕ್ರಾಸ್ ನಲ್ಲಿ ಪ್ರಚಾರಸಭೆಯನ್ನು ಕೈಗೊಂಡರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ನನ್ನನ್ನು ದಾಖಲೆಯ ಮತಗಳನ್ನು ಆಯ್ಕೆ ಮಾಡಿದ್ದೀರಿ. ನೀವು ನನ್ನಮೇಲೆ ಇಟ್ಟಿದ್ದ ಭರವಸೆಗೆ ಪ್ರತಿಯಾಗಿ ನಾನು ಕಳೆದ ಐದು ವರ್ಷಗಳಲ್ಲಿ ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ 1,800 ಕೋಟಿ ರೂ. ಅನುದಾನ ತಂದಿದ್ದು ಬಿಜೆಪಿ ಸರ್ಕಾರ ಕುಮಟಾ ಹೊನ್ನಾವರ ಅಭಿವೃದ್ಧಿಗೆ ವಿಶೇಷ ಕಾಳಜಿವಹಿಸಿದೆ. ಕೊಡಕಣಿ ಐಗಳಕುರ್ವೆ ಸೇತುವೆಗೆ ಹಿಂದಿನ ಸರ್ಕಾರ ಗುದ್ದಲಿಪೂಜೆಯನ್ನಷ್ಟೇ ಮಾಡಿ ಕೈ’ತೊಳೆದುಕೊಂಡಿತ್ತು. ನಮ್ಮ ಸರ್ಕಾರ ಬಂದನಂತರ ಅಧಿಕಾರಿಗಳೊಡನೆ ನಿರಂತರ ಮಾತುಕತೆ ನಡೆಸಿ ಸಂಪರ್ಕ ರಸ್ತೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಮಾಡಿಕೊಂಡು, ಕಾಮಗಾರಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇವೆ. 19 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಿರ್ಜಾನ-ಹೆಗಡೆ ನಡುವಿನ ಸೇತುವೆ ನಮ್ಮ ಸರ್ಕಾರದ ಇನ್ನೊಂದು ಮಹತ್ವದ ಕೊಡುಗೆ. ಇದರ ಜೊತೆಗೆ ಶಿಕ್ಷಣ, ಆರೋಗ್ಯ, ರಸ್ತೆ ಹಾಗೂ ಕುಡಿಯುವ ನೀರಿನ ಯೋಜನೆಗಾಗಿ ಬಿಜೆಪಿ ಸರ್ಕಾರ ಕೆಲಸಮಾಡಿದೆ. ಇದೆಲ್ಲವನ್ನು ಗಮನದಲ್ಲಿಟ್ಟಿಕೊಂಡು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿರುವ ನನಗೆ ಆಶೀರ್ವಾದ ಮಾಡಿ, ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತನೀಡಬೇಕೆಂದು ವಿನಂತಿಸಿದರು.
ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಕ್ಷೇತ್ರದ ಚುನಾವಣಾ ಪ್ರಭಾರಿ ಎಮ್. ಜಿ. ಭಟ್, ಅಭ್ಯರ್ಥಿ ಪ್ರಮುಖರಾದ ಸುಬ್ರಾಯ ವಾಳ್ಕೆ, ಮಿರ್ಜಾನ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮಹೇಶ ನಾಯಕ ದೇವರಬಾವಿ, ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ವಿಶ್ವನಾಥ ನಾಯ್ಕ, ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಬಾಳಾ ಡಿಸೋಜ, ಬರ್ಗಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಭಾರತಿ ಹರಿಕಂತ್ರ, ಮೀನುಗಾರರ ಮುಖಂಡರಾದ ಮಂಜುನಾಥ ಹರಿಕಂತ್ರ, ಪ್ರಮುಖರಾದ ಸಂತೋಷ ಹರಿಕಂತ್ರ, ಆನಂದ ಹರಿಕಂತ್ರ, ಶೇಖರ ಹರಿಕಂತ್ರ, ಪಾಂಡುರಂಗ ಪಟಗಾರ, ಗೊಯ್ದು ಪಟಗಾರ, ಶೇಷ ಪಟಗಾರ, ಅಣ್ಣಪ್ಪ ನಾಯ್ಕ, ಶಕ್ತಿಕೇಂದ್ರದ ಪ್ರಮುಖರು, ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.