ಹೊನ್ನಾವರ : ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೧ ಬಾಲಕರು ೯ ಬಾಲಕಿಯರು ಒಟ್ಟು ೨೦ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಿದ್ದರು. ಕುಮಾರಿ ಗೌತಮಿ ರಾ ನಾಯ್ಕ ೬೨೫ ಕ್ಕೆ ೬೦೪ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಬನದಿರುತ್ತಾಳೆ ಮತ್ತು ೨೦ ವಿದ್ಯಾರ್ಥಿಗಳಲ್ಲಿ ೧೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ , ೯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಶಾಲೆಯು ೧೦೦ ಕ್ಕೆ ೧೦೦ ಗಳಿಸಿರುತ್ತದೆ ಮತ್ತು ‘ಎ’ ಗ್ರೇಡ್ ನ್ನು ಪಡೆದಿರುತ್ತದೆ. ವಿದ್ಯಾರ್ಥಿಗಳನ್ನು ಮತ್ತು ತರಬೇತಿ ಮಾಡಿದ ಶಿಕ್ಷಕರನ್ನು ಶ್ರೀ ಭಾರತಿ ಎಜ್ಯುಕೇಶನ್ ಟ್ರಸ್ಟ ನ ಆಡಳಿತ ಮಂಡಳಿಯವರು ಅಭಿನಂದಿಸಿದರು.