ಗೋಕರ್ಣ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಬಂದಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿ ¨ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ಪ್ರಾಚೀನ ಶಿಕ್ಷಣದಲ್ಲಿ ಸಾಧನೆ ಮಾಡುವ ಜತೆಜತೆಗೆ ಆಧುನಿಕ ಶಿಕ್ಷಣದಲ್ಲೂ ಅಮೋಘ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಹೇಳಿದ್ದಾರೆ.


ಗುರುಕುಲದ ವಿದ್ಯಾರ್ಥಿಗಳು ಕಳೆದ ವರ್ಷವೂ ಶೇಕಡ 100ರಷ್ಟು ಫಲಿತಾಂಶ ತಂದುಕೊಟ್ಟಿದ್ದರು. ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿಗಳ ಪೈಕಿ ಆರು ಮಂದಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, 19 ವಿದ್ಯಾರ್ಥಿಗಳು ಪ್ರಥಮ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಚಿರಂತನ್ ಯು.ಎಸ್ ಶೇಕಡ 96.96 (606 ಅಂಕ) ಪಡೆದು ಗುರುಕುಲಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

RELATED ARTICLES  ಕಷ್ಟ ಕಾಲದಲ್ಲಿ ನೆರವಿನ ಹಸ್ತ ಚಾಚಿದ ಆರ್.ವಿ.ದೇಶಪಾಂಡೆಯವರಿಗೆ ಅಭಿನಂದನೆ


ತಿಲಕಾಚಾರ್ಯ ವಾಸುದೇವಾಚಾರ್ಯ ವಡಕಿ ಹಾಗೂ ಸಂಪತ್ ದಿವಾಕರ ಹೆಗಡೆ ಶೇಕಡ 93.44 (584 ಅಂಕ) ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ತೇಜಾ ನಾರಾಯಣ ಅವಧಾನಿ ಶೇಕಡ 90.88 (568) ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

RELATED ARTICLES  ಪ್ರೌಢಶಾಲಾ ಮುಖ್ಯ ಶಿಕ್ಷಕರಿಗಾಗಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಾಗಾರ


ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ, ವಿದ್ಯಾ ಪರಿಷತ್ ಅಧ್ಯಕ್ಷ ಡಾ.ಎಂ.ಆರ್.ಹೆಗಡೆ, ವಿವಿವಿ ಪದಾಧಿಕಾರಿಗಳಾದ ಡಿ.ಡಿ.ಶರ್ಮಾ, ಅಶ್ವಿನಿ ಉಡುಚೆ ಅವರು ಅಭಿನಂದಿಸಿದ್ದಾರೆ.