ಕುಮಟಾ : 2022 23 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 53 ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 100 ಕ್ಕೆ 100 ಫಲಿತಾಂಶ ಸಾಧಿಸಿದೆ. ಸತತವಾಗಿ 13 ನೇ ವರ್ಷವೂ 100% ಫಲಿತಾಂಶ ದಾಖಲಿಸಿ ಸಂಸ್ಥೆ ಗಮನ ಸೆಳೆದಿದೆ.
ಕು. ಅನನ್ಯಾ ಕೆ ಭಾಗವತ್ 614 ಅಂಕ (98.24%)ಪಡೆದು ಶಾಲೆಗೆ ಪ್ರಥಮ ಸ್ಥಾನ, ಕುಮಾರಿ ರುಶಾಲಿ ಪಿ. ಎಸ್ 604 ಅಂಕ, 96.64%) ಪಡೆದು ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಕು. ಪ್ರಜ್ವಲ್ ಆರ್ ಭಾಗವತ್ 590 ಅಂಕ (94.4%) ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾನೆ. 11 ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪೆಡದು ಉತ್ತೀರ್ಣರಾದರೆ 15 ವಿದ್ಯಾರ್ಥಿಗಳು ಶೇಕಡಾ 80ಕ್ಕಿಂತ ಹೆಚ್ಚು, 19 ವಿದ್ಯಾರ್ಥಿಗಳು ಶೇಕಡಾ 70 ಕ್ಕಿಂತ ಹೆಚ್ಚು ಹಾಗೂ 8 ವಿದ್ಯಾರ್ಥಿಗಳು ಶೇಕಡಾ 60ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆ ತೋರಿದ್ದಾರೆ. ಶಾಲೆಯ ಗುಣಾತ್ಮಕ ಫಲಿತಾಂಶ ಶೇಕಡಾ 91.62 ಆಗಿ ‘A’ ಗ್ರೇಡ್ ಸ್ಥಾನ ಪಡೆದಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಪಾಲಕರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.