ಕುಮಟಾ : ಕಾಂಗ್ರೆಸ್ ಅಭ್ಯರ್ಥಿ ನಿವೇದಿತ ಆಳ್ವಾ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ತೆರೆ ಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಯಾರದ್ದೂ ಫೋನ್ ತೆಗೆದುಕೊಳ್ಳದೆ, ಕಾರ್ಯಕರ್ತರಿಗೆ ಕೈ ಕೊಟ್ಟಿದ್ದಾರೆ ಎಂಬೆಲ್ಲಾ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ನಿವೇದಿತ ಆಳ್ವಾ ವಿಡಿಯೋ ಸಂದೇಶ ನೀಡಿದ್ದು, ಅದರ ಯತಾಪ್ರತಿ ಇಲ್ಲಿದೆ.
ನಮಸ್ಕಾರ,ಇವತ್ತು ಬೆಳಿಗ್ಗೆಯಿಂದ ಗೋಕರ್ಣ, ಕುಮಟಾ,ಹೊನ್ನಾವರ ಭಾಗದ ಎಲ್ಲಾ ಬೂತಗಳನ್ನು ಸಂಪಕಿಸಿದ್ದೇನೆ.ಕೆಲವು ಕಾರ್ಯಕರ್ತರ ಮನೆಗೂ ಭೇಟಿ ನೀಡಿದ್ದೇನೆ. ಕೆಲವು ಸಾಮಾಜಿಕ ಜಾಲತಾಣದಲ್ಲಿ ನಾನು ನಾಪತ್ತೆ ಅಗಿದ್ದೇನೆಂದು ಅಪಪ್ರಚಾರ ಮಾಡಿರುವುದನ್ನು ನಾನು ನೋಡಿದ್ದೇನೆ. ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ,ನಾನು ಕುಮಟಾದಲ್ಲಿಯೇ ಇದ್ದೇನೆ.ಈ ಭಾಗಕ್ಕೆ ಅಭಿವೃದ್ಧಿ ತರಲು ಹೊರಟಿದ್ದೇನೆ.ಸುಳ್ಳು ಸುದ್ದಿ ಹಬ್ಬಿಸಿ ಅದೆಲ್ಲವನ್ನು ನಿಲ್ಲಿಸಲು ಸಾಧ್ಯವಿಲ್ಲ. ಚುನಾವಣೆ ಆದ ಮೇಲೆ ಇದರ ಬಗ್ಗೆ ಚರ್ಚೆ ಮಾಡಿ ಯಾರು ಏನು ಅಪಪ್ರಚಾರ ಮಾಡಿದ್ದಾರೊ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ.
ನನ್ನ ತಂದೆ ,ತಾಯಿ, ಅಣ್ಣ ,ತಂಗಿ ಸಮಾನಾದ ನೀವು ಯಾವುದೇ ಕುತಂತ್ರಿಗಳ ಷಡ್ಯಂತ್ರಕ್ಕೆ ಕಿವಿಗೊಡದೇ ಕಾಂಗ್ರೆಸ್ ಪಕ್ಷಕ್ಕೆ ಮತಹಾಕುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ನಾಳೆ ಪ್ರತಿಯೊಂದು ಭೂತ್ ಗೆ ಬೇಟಿ ನೀಡಿ ಕಾರ್ಯಕರ್ತರಿಗೆ ಬೇಟಿಯಾಗುತ್ತೇನೆ – ನಿವೇದಿತ್ ಆಳ್ವಾ