ಕುಮಟಾ : ತಾಲೂಕಿನ ಗಿಬ್ ಪ್ರೌಢಶಾಲೆಯಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ (ಸಂಖ್ಯೆ 102) ರಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ತಮ್ಮ ಹಕ್ಕು ಚಲಾಯಿಸಿದರು. ಮುಂಜಾನೆ ತಾಯಿ ಆಶೀರ್ವಾದ ಪಡೆದ ದಿನಕರ ಶೆಟ್ಟಿ, ಉಪ್ಪಿನ ಗಣಪತಿ ಹಾಗೂ ವಿವಿಧ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು, ನಂತರ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ವೀಕ್ಷಣೆ ಮಾಡಿದಾಗ ಒಳ್ಳೆಯ ವಾತಾವರಣ ಬಿಜೆಪಿ ಪರವಾಗಿದೆ. ಜನರಿಗೆ ಬಿಜೆಪಿ ಬಗ್ಗೆ ಹೆಚ್ಚಿನ ಒಲವಿದೆ. ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ ಎಂಬ ಭರವಸೆ ಮೂಡಿದೆ. ಎಲ್ಲರೂ ಸ್ಪೂರ್ತಿಯಿಂದ ಮತದಾನ ಮಾಡುತ್ತಿದ್ದಾರೆ. ಅಭಿವೃದ್ಧಿ ಬೆಂಬಲಿಸುವ ಜನರೆಲ್ಲರೂ ಬಿಜೆಪಿಗೆ ಮತ ನೀಡುವುದು ಖಚಿತವಾಗಿದೆ. ಹೀಗಾಗಿ ಹಿಂದಿಗಿಂತ ಹೆಚ್ಚಿನ ಮತಗಳಿಸಿ, ಜಯಗಳಿಸುವ ವಿಶ್ವಾಸ ನನಗಿದೆ ಎಂದು ಇದೇ ವೇಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.