ಕುಮಟಾ : ರಾಜ್ಯ ವಿಧಾನಸಭೆಗಾಗಿ ತಾಲೂಕಿನ 151 ಮತಗಟ್ಟೆಗಳಲ್ಲಿ ನಡೆದ ಚುನಾವಣಾ ಮತದಾನ ಶಾಂತಿಯುತವಾಗಿತ್ತು. ಬುಧವಾರ ಬೆಳಗ್ಗೆ ಏಳು ಗಂಟೆಯಿಂದ ಮಂದಗತಿಯಲ್ಲಿ ಪ್ರಾರಂಭವಾದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಅವಧಿಯವೇಳೆಗೆ ಸ್ವಲ್ಪ ಮಟ್ಟಿಗೆ ಚುರುಕಾಗಿ ಮುನ್ನಡೆಯಿತು. ಕುಮಟಾದಲ್ಲಿ ಒಟ್ಟೂ 70.28% ರಷ್ಟು ಮತದಾನವಾಗಿದೆ. ಒಟ್ಟೂ ಚಲಾವಣೆಯಾಗಿದ್ದು 1,32,646 ಮತವಾಗಿದ್ದರೆ ಈ ಪೈಕಿ ಮಹಿಳೆಯರು 65,863, ಪುರುಷರು 66,781 ಮತ ಚಲಾಯಿಸಿದ್ದಾರೆ.

RELATED ARTICLES  12 ವರ್ಷದ ಹಿಂದೆ ಕಳ್ಳತನ ಮಾಡಿದ್ದ ಆರೋಪಿ, ಅರೆಸ್ಟ್..!

ಯುವ ಮತದಾರರು ಉತ್ಸಾಹದಿಂದ ಮತದಾನ ಮಾಡಿದರೆ, ಅಂಗವಿಕಲರು ಹಾಗೂ ಅನಾರೋಗ್ಯದವರೂ ಸಹ ಇತರರ ಸಹಕಾರದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು. ಪಟ್ಟಣದ ಗುಡಗಾರಗಲ್ಲಿ ಶಾಲೆಯಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿರುವ ದೃಶ್ಯ ಕಂಡುಬಂತು.

ಬೆಳಿಗ್ಗೆಯಿಂದ ರಣ ಬಿಸಿಲು ಮತದಾರರನ್ನು ಕಾಡಿತು. ಬಿಸಿಲ ಝಳ ಹಾಗೂ ಸೆಖೆಯಿಂದ ಜನ ತತ್ತರಿಸಿದ್ದು ಮತಗಟ್ಟೆಗಳಲ್ಲಿ ಕಂಡ ಬಂದಿತು. ಚುನಾವಣಾ ಸ್ಪರ್ಧಾಳುಗಳು ವಿವಿಧ ಬೂತ್ಗಳಿಗೆ ಭೇಟಿ ನೀಡಿ ಅಲ್ಲಿ ತಮ್ಮ ಪಕ್ಷದ ಕುರಿತಾದ ಒಲವು ಹಾಗೂ ಜನತೆಯ ಮನಸ್ಥಿತಿಯನ್ನು ಅರಿಯುವ ಯತ್ನ ನಡೆಸಿದರು.

RELATED ARTICLES  ಮನೆಯ ಅಟ್ಟದಲ್ಲಿ ಅಡಗಿದ್ದ ಕಾಳಿಂಗ ಸರ್ಪದ ರಕ್ಷಣೆ.

ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು, ಸಿಆರ್ಪಿಎಫ್ ಯೋಧರು ಹಾಗೂ ಪೊಲೀಸರಿದ್ದ ಕಾರಣ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.