ಕುಮಟಾ: ಮಿರ್ಜಾನಿನ ತಾರಿಬಾಗಿಲ ನಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 23 ಫಲಾನುಭವಿಗಳಿಗೆ ಉಚಿತ ಗ್ಯಾಸ ಕಿಟ್‍ಗಳನ್ನು ವಿತರಿಸಿ ಈ ಯೋಜನೆಯ ಕುರಿತಾಗಿ ಮಾತನಾಡಿದ ನಾಗರಾಜ ನಾಯಕ ತೊರ್ಕೆಯವರು 2011ಕ್ಕಿಂತ ಮೊದಲು ಪಡಿತರ ಚೀಟಿ ಹೊಂದಿದ, ಕೇಂದ್ರ ಸರಕಾರ ಪ್ರಕಟಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ನೋಂದಾಯಿತರಾದ, ಇದುವರೆಗೂ ಗ್ಯಾಸ್ ಸೌಲಭ್ಯವನ್ನು ಹೊಂದಿರದವರಿಗೆ ಈ ಯೋಜನೆಯ ಸೌಲಭ್ಯ ದೊರೆಯುತ್ತಿದೆ ಎಂದು ನುಡಿದು ಅಂತಹ ಫಲಾನುಭವಿಗಳ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸಿ ಸಂಬಂಧಪಟ್ಟವರಿಗೆ ತಲುಪಿಸಿ, ಮಂಜೂರಾತಿ ಪಡೆದು ಅರ್ಹ ಫಲಾನುಭವಿಗಳ ಹಣ & ಸಮಯ ವ್ಯರ್ಥವಾಗದಂತೆ ನೋಡಿಕೊಂಡು ಯಾವುದೇ ಅಲೆದಾಟವಿಲ್ಲದಂತೆ ಅವರ ಮನೆ ಬಾಗಿಲಿಗೆ ಉಚಿತವಾಗಿ ಈ ಸೌಲಭ್ಯ ಸಿಗುವಂತೆ ಮಾಡಿ ಕೇಂದ್ರ ಸರಕಾರದ ಈ ಜನಪರ ಯೋಜನೆಯನ್ನು ಬಡವರ ಮನೆಬಾಗಿಲಿಗೆ ತಲುಪಿಸುವಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರು ಶ್ರಮಿಸುತ್ತಿದ್ದು ಈ ಯೋಜನೆಯ ಮುಂದುವರಿದ ಭಾಗವಾಗಿ ಇದುವರೆಗೂ ಗ್ಯಾಸ್ ಸಂಪರ್ಕವನ್ನು ಹೊಂದಿರದ ಎಲ್ಲ ಬಿಪಿಎಲ್. ಕಾರ್ಡದಾರರಿಗೆ ಕೇಂದ್ರ ಸರಕಾರ ಈ ಜನಪರ ಯೋಜನೆಯನ್ನು ಘೋಷಿಸುವ ಮುನ್ಸೂಚನೆಯಿದೆ. ಆಗ ಪುನಃ ನಿಮ್ಮಲ್ಲಿಗೆ ಬಂದು ಉಳಿದ ಫಲಾನುಭವಿಗಳಿಗೂ ಇದನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ತಾವೆಲ್ಲ ಮಾಡುವ ಭರವಸೆಯನ್ನು ನೀಡಿದರು.
ಫಲಾನುಭವಿಗಳಾದ ಮಂಗಲಾ ಬಿ. ಅಂಬಿಗ, ಮಂಗಲಾ ಟಿ. ಅಂಬಿಗ, ಜಟ್ಟಮ್ಮ ಎಲ್. ಅಂಬಿಗ, ಗೌರಿ ಆಯ್. ಅಂಬಿಗ, ಕನ್ನೆ ವಿ. ಅಂಬಿಗ, ಕಮಲಾ ಎನ್. ಅಂಬಿಗ, ಪ್ರೇಮಾ ಜಿ. ಅಂಬಿಗ, ಸರಸಿ ಎಚ್. ಅಂಬಿಗ, ಶಾಂತಿ ಜಿ. ಅಂಬಿಗ, ಸಣ್ಣಮ್ಮ ಎಮ್. ಅಂಬಿಗ, ತುಳಸಿ ವಿ. ಅಂಬಿಗ, ಸರಸ್ವತಿ ಜಿ. ಅಂಬಿಗ, ರಮಾ ಎಮ್. ಅಂಬಿಗ, ಸವಿತಾ ಆರ್. ಅಂಬಿಗ, ರಾಮಿ ಎನ್. ಅಂಬಿಗ, ಪರಮೇಶ್ವರಿ ಕೆ. ಅಂಬಿಗ, ಮಂಗಲಾ ಜೆ. ಅಂಬಿಗ, ಕಾವೇರಿ ಕೆ. ಅಂಬಿಗ, ಕಮಲಾ ಆಯ್. ಅಂಬಿಗ, ಮುಕ್ತಾ ಎಮ್. ಅಂಬಿಗ, ಸುಬ್ಬಿ ಜಿ. ಅಂಬಿಗ, ಸುಶೀಲಾ ಕೆ. ಅಂಬಿಗ, ಪಾರ್ವತಿ ಎಮ್. ಅಂಬಿಗ ಇವರುಗಳಿಗೆ ಗ್ಯಾಸ್ ಸಿಲಿಂಡರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ, ಬಿಜೆಪಿ ಮುಖಂಡರಾದ ಮಂಜು ಮರಾಠೆ, ಪ್ರೇಮಾ ನಾಯ್ಕ, ಶಕ್ತಿಕೇಂದ್ರದ ಅಧ್ಯಕ್ಷರಾದ ವೆಂಕಟ್ರಮಣ ಕವರಿ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.ಗಣೇಶ ಅಂಬಿಗ ಸ್ವಾಗತಿಸಿ ವಂದಿಸಿದರು.