ಸಿದ್ದಾಪುರ : ತಾಲೂಕಿನ ಕಂಚಿಕೈಯ ಯಕ್ಷಗಾನ ಕಲಾವಿದ ಗಣಪತಿ ಪರಮಯ್ಯ ಹೆಗಡೆ (74) ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಕಂಚಿಕೈ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಶಿರಸಿಯ ಅಭಿಮಾನ ಸಾಂಸ್ಕೃತಿಕ ವೇದಿಕೆಯ ಮೃದಂಗ ವಾದನ ಕಲಾವಿದರಾಗಿದ್ದರು. ಅವರಿಗೆ ಪತ್ನಿ, ಭಾರತೀಯಬಭೂಸೇನೆಯಲ್ಲಿ ಕಾರ್ಯನಿರ್ವಹಿಸಿದ ಪುತ್ರ ಲಕ್ಷ್ಮೀಶ ಹೆಗಡೆ, ಪುತ್ರಿ ಹಾಗೂ ಬಂದುಬಳಗ ಇದ್ದಾರೆ.