ಯಲ್ಲಾಪುರ : ವಿಧಾನಸಭಾ ಚುನಾವಣೆ ಫಲಿತಾಂಶಗಳು ಹೊರಬಿದ್ದಿದ್ದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ‌ ಹೆಬ್ಬಾರ್ ಜಯಭೇರಿ ಬಾರಿಸಿದ್ದಾರೆ.

ಗೆಲುವಿನ ಹಿನ್ನೆಲೆಯಲ್ಲಿ ಪ್ರತಿಕ್ರಯಿಸಿದ ಅವರು, ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಯಲ್ಲಾಪುರ- ಮುಂಡಗೋಡ- ಬನವಾಸಿ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಅಭೂತಪೂರ್ವ ಜಯಭೇರಿ ಸಾಧಿಸಲು ಕಾರಣರಾದ ದೈವ ದುರ್ಲಭ ಸ್ಟಾರ್‌ ಪ್ರಚಾರಕರು, ಕಾರ್ಯಕರ್ತರು, ಮುಖಂಡರು, ಮತಬಾಂಧವರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

RELATED ARTICLES  ಶಿರಸಿಯಲ್ಲಿ ಬೆಂಕಿಗೆ ಬಲಿಯಾದ ಶಿಕ್ಷಕ: ನಡೆಯಿತು ಹೃದಯ ವಿದ್ರಾವಕ ಘಟನೆ.

ನೀವು ನೀಡಿದ ಈ ಅಧಿಕಾರಕ್ಕೆ ಯಾವುದೇ ಚ್ಯುತಿ ಬಾರದಂತೆ ಮುಂದಿನ ಐದು ವರ್ಷಗಳಲ್ಲಿನ ಕ್ಷೇತ್ರದ ಆರೋಗ್ಯ, ನೀರಾವರಿ, ಶಿಕ್ಷಣ, ವಸತಿ, ಔದ್ಯೋಗಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ‌ ಹಾಗೂ ಎಲ್ಲಾ ಸಮುದಾಯಗಳ ಕಲ್ಯಾಣಕ್ಕೆ ದುಡಿಯುತ್ತೇನೆ ಎಂದು ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

RELATED ARTICLES  ಇಂದು ಮತ್ತೆ ದ್ವಿಶತಕದ ಗಡಿ ದಾಟಿದ ಉತ್ತರ ಕನ್ನಡದ ಕೊರೋನಾ ಕೇಸ್ ಸಂಖ್ಯೆ