ಕುಮಟಾ : ನಾನು ಎದುರಿಸಿದ ಈ ಹಿಂದಿನ ಚುನಾವಣೆಗಳಲ್ಲಿ ಪ್ರತಿ ಚುನಾವಣೆಯಲ್ಲಿಯೂ ಮತದ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈ ಸಲ 59,966 ಮತಗಳನ್ನು ಪಡೆದು ಹಿಂದಿನ ಚುನಾವಣೆಗಿಂತ ಹೆಚ್ಚಿನ ಮತಗಳಿಸಬೇಕೆಂಬ ನನ್ನ ಆಸೆ ಈಡೇರಿದೆ. ಇದು ಸಂತಸ ತಂದಿದೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿ ನೂತನ ಶಾಸಕರಾಗಿ ಆಯ್ಕೆಯಾಗಿರುವ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಹೊಳೆಗದ್ದೆ ಟೋಲ್ ನಾಕಾದ ಸನಿಹದಿಂದ ಕರ್ಕಿ ಅವರಿಗೆ ಕಾರ್ಯಕರ್ತರು ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

25 ಸಾವಿರ, 28 ಸಾವಿರ, 35 ಸಾವಿರ, 59 ಸಾವಿರ ಹೀಗೆ ಪ್ರತೀ ಚುನಾವಣೆಯಲ್ಲಿ ಮತಗಳು ಏರಿಕೆಯಾಗಿದ್ದವು. ಈ ಬಾರಿ ಅದಕ್ಕಿಂತ ಹೆಚ್ಚಿಗೆ ಮತ ಬಂದಿದೆ. ಇದಕ್ಕೆ ಕಾರ್ಯ ಮಾಡಿದಂತಹ ಕಾರ್ಯಕರ್ತರು ಹಾಗೂ ಪಕ್ಷದ ಎಲ್ಲ ಮುಖಂಡರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ, ಹೊನ್ನಾವರ ಭಾಗದ ಪ್ರಭಲ ವ್ಯಕ್ತಿ‌ ಶಿವಾನಂದ ಹೆಗಡೆ ಪಕ್ಷ ಸೇರಿದ್ದು ಪ್ಲಸ್ ಆಗಿದೆ ಎಂದರು.

RELATED ARTICLES  ದೇಸೀ ಗೋ ಆಧಾರಿತ ಮೌಲ್ಯವರ್ಧಿತ ಗೊಬ್ಬರ "ಸ್ವರ್ಗಸಾರ"

ನಾನು ಯಾರಿಗೂ ಉಪದ್ರವ ಕೊಡದೆ ಪ್ರಾಮಾಣಿಕವಾಗಿ ಜನರ ಪರವಾಗಿ ನಿಂತು ಕೆಲಸ ಮಾಡಿದ್ದೇನೆ, ಆದರೆ ನಾನು ಅವಲೋಕನ ಮಾಡಿದಾಗ ನನ್ನ ಬಗ್ಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರವನ್ನು ಮಾಡಿದ್ದರಿಂದ ನನಗೆ ಸ್ವಲ್ಪ ಪ್ರಮಾಣದಲ್ಲಿ ಮತದ ಕೊರತೆಯಾಯಿತು. ಇಲ್ಲದಿದ್ದರೆ 65,000 ರಿಂದ 70,000 ಮತಗಳಿಸುವ ನಿರೀಕ್ಷೆ ಇತ್ತು ಎಂದು ಅವರು ಅಭಿಪ್ರಾಯಪಟ್ಟರು. “ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ” ಎಂಬ ಗಾದೆಯನ್ನು ಸ್ಮರಿಸಿಕೊಂಡ ಅವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದವರಿಗೆ ದೇವರು ಸರಿಯಾದ ಶಿಕ್ಷೆ ನೀಡಿದ್ದಾನೆ. ದೇವರು ದೊಡ್ಡವನು ಅವರಿಗೆ ದೇವರು ನಿನ್ನೆ ದಿನ ಶಿಕ್ಷೆ ನೀಡಿದ್ದಾನೆ ಎಂದು ಅವರು ತಿಳಿಸಿದರು.

RELATED ARTICLES  ಹೊನ್ನಾವರದಲ್ಲಿ ಸೋನಿಯವರ ರೋಡ್ ಶೋ! ಹೋರಾಟಗಾರನ ಜೊತೆ ಹೆಜ್ಜೆ ಹಾಕಿದ ಕಾಳೀ ಸ್ವಾಮಿ.

ಕ್ಷೇತ್ರದ ಕಾರ್ಯಕರ್ತರು ನನಗಾಗಿ ಯಾವುದೇ ಫಲಾಅಪೇಕ್ಷೆ ಇಲ್ಲದೆ ದುಡಿದು ನನ್ನನ್ನು ಗೆಲ್ಲಿಸಿದ್ದಾರೆ. ಈ ಹಿಂದೆಯೇ ನಾನು ಕ್ಷೇತ್ರಕ್ಕೆ ಈ ಹಿಂದೆ ಯಾರೂ ತರದಷ್ಟು ಅನುದಾನವನ್ನ ತಂದಿದ್ದೇನೆ. ರಸ್ತೆ, ಸೇತುವೆ, ಕಾಲೇಜುಗಳಿಗೆ ಸಾಕಷ್ಟು ಅನುದಾನ ತಂದು ಜನರ ಆಶೋತ್ತರ ಈಡೇರಿಸುವ ಕಾರ್ಯಕ್ಕೆ ಮುಂದಾಗಿದ್ದೆ, ಹೀಗಾಗಿ ಎಲ್ಲ ಜನರಿಗೆ ಸ್ಪಂದಿಸಲು ಸಾಧ್ಯವಾಗಿಲ್ಲ. ಆದರೆ ಅಭಿವೃದ್ಧಿಯೇ ನನ್ನ ಗುರಿಯಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಶಿವಾನಂದ ಹೆಗಡೆ ಕಡತೋಕಾ ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಅವರು ನನ್ನ ಕೈ ಹಿಡಿದಿದ್ದು ನನಗೆ ಪ್ಲಸ್ ಆಗಿದೆ. ಅನೇಕರು ಶಿವಾನಂದ ಹೆಗಡೆಯವರನ್ನು ನೀವು ಪಕ್ಷಕ್ಕೆ ಕರೆದುಕೊಂಡಿದ್ದು ಒಳ್ಳೆಯದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನನ್ನ ಗೆಲುವಿಗೂ ಅವರು ತುಂಬಾ ಸಹಕಾರಿಯಾಗಿದ್ದಾರೆ. – ದಿನಕರ ಶೆಟ್ಟಿ, ಶಾಸಕರು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ.