ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಘಟಕದ ವತಿಯಿಂದ ನೂತನವಾಗಿ ಆಯ್ಕೆಯಾದ ಕುಮಟಾ ಶಾಸಕ ದಿನಕರ ಶೆಟ್ಟಿಯವರಿಗೆ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದಿನಕರ ಶೆಟ್ಟಿಯವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಜಿಲ್ಲಾ ಸಂಘದ ಅಧ್ಯಕ್ಷರಾದ ಆನಂದ ಗಾಂವಕರ, ತಾಲೂಕಾ ಸಂಘದ ಅಧ್ಯಕ್ಷರಾದ ರವೀಂದ್ರ ಭಟ್ಟ ಸೂರಿ, ಕಾರ್ಯದರ್ಶಿ ಅನಿಲ ದೇಶಭಂಡಾರಿ, ಉಪಾಧ್ಯಕ್ಷರಾದ ಕೃಷ್ಣಮೂರ್ತಿ ನಾಯಕ,ಖಜಾಂಚಿ ಪ್ರಹ್ಲಾದ, ಪದಾಧಿಕಾರಿಗಳಾದ ಕಲ್ಪನಾ ನಾಯಕ, ಹಾಗೂ ವಿದ್ಯಾಧರ ಅಡಿ, ಎಸ್.ಕೆ.ಅಂಬಿಗ, ಎಮ್.ಎನ್.ಗೌಡ ಹಾಜರಿದ್ದರು.