ಕುಮಟಾ : ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದರೂ ಕೊನೆಯ ಹಂತದವರೆಗೂ ನಿಗೂಢವಾಗಿದ್ದ ಅದೃಷ್ಟ ದೇವತೆ ದಿನಕರ ಶೆಟ್ಟಿ ಅವರಿಗೆ ಒಲಿದಿದೆ. ದಿನಕರ ಶೆಟ್ಟಿ ಗೆಲುವು ಸಾಧಿಸಲು ಸಹಸ್ರಾರು ಕಾರ್ಯಕರ್ತರು ಹಗಲಿರುಳೆನ್ನದೇ ದುಡಿದಿದ್ದಾರೆ. ಅದರ ಜೊತೆಗೆ ಈ ಗೆಲುವಿನಲ್ಲಿ ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸಿದ್ದು ಬಿಜೆಪಿ ಮುಖಂಡರು ಹಾಗೂ ಚುನಾವಣಾ ಪ್ರಭಾರಿಗಳಾದ ಎಂ.ಜಿ ಭಟ್ಟ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.

ದಿನಕರ ಶೆಟ್ಟಿ ಅವರ ಚುನಾವಣಾ ಪ್ರಚಾರದಲ್ಲಿ ಪ್ರತಿನಿತ್ಯ ಅವರ ಜೊತೆಗೆ ಇದ್ದು ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಪ್ರತಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ದಿನಕರ ಶೆಟ್ಟಿಯವರ ಸಾಧನೆಗಳ ಕುರಿತಾಗಿ ಹಾಗೂ ಬಿಜೆಪಿಯ ಚುನಾವಣಾ ಪ್ರಣಾಳಿಕೆಗಳು ಮತ್ತು ಆಡಳಿತದ ಕುರಿತಾಗಿ ಜನರಿಗೆ ಮನಮುಟ್ಟುವಂತೆ ಮಾತನಾಡುವಲ್ಲಿ ಎಂ.ಜಿ ಭಟ್ಟ ಪ್ರಮುಖ ಪಾತ್ರ ವಹಿಸಿದ್ದಾರೆ.

RELATED ARTICLES  ಸಂಪನ್ನವಾದ ಗ್ರಾಮ ಸ್ವರಾಜ್ಯ ಸಮಾವೇಶ : ಕಾರ್ಯಕರ್ತರಿಗೆ ಬಲ ತುಂಬಿದ ಗಣ್ಯರು

ಅನೇಕ ಹವ್ಯಕ ಮುಖಂಡರನ್ನು ಹಾಗೂ ಹವ್ಯಕರನ್ನು ಒಟ್ಟು ಸೇರಿಸಿ ಬಿಜೆಪಿಗೆ ಮತ ಚಲಾವಣೆ ಮಾಡುವಂತೆ ಪ್ರೇರೇಪಿಸಿರುವುದರಿಂದ ಹಿಡಿದು ಇತರೆಲ್ಲ ಸಮಾಜದ ಯುವಕರನ್ನು ಹಾಗೂ ತಮ್ಮ ಬೆಂಬಲಿಗರನ್ನು ಚುನಾವಣೆಯಲ್ಲಿ ಹಗಲಿರುಳು ಕಾರ್ಯ ಮಾಡುವಂತೆ ಪ್ರೇರೇಪಿಸಿದವರು ಎಂ.ಜಿ ಭಟ್ಟ ಎನ್ನುವುದು ಅವರ ಅಭಿಮಾನಿಗಳ ಮಾತಾಗಿದೆ.

ಹಗಲಿರುಳೆನದೇ ತಮ್ಮ ಉದ್ಯೋಗ ಹಾಗೂ ಇತರ ವ್ಯವಹಾರಗಳನ್ನು ಬದಿಗೊತ್ತಿ, ಚುನಾವಣೆಯ ಮುಕ್ತಾಯದವರೆಗೂ ದಿನಕರ ಶೆಟ್ಟಿ ಅವರಿಗೆ ಬೆನ್ನೆಲುಬಾಗಿ ನಿಂತವರು ಎಂ.ಜಿ ಭಟ್ ರವರು. ಅವರ ಶ್ರಮ ಹಾಗೂ ಸಹಕಾರ ದಿನಕರ ಶೆಟ್ಟಿ ಅವರಿಗೆ ವಿಜಯದ ರೂಪದಲ್ಲಿ ಸಿಕ್ಕಿದೆ ಎಂದು ಬಣ್ಣಿಸಲಾಗುತ್ತಿದೆ.

RELATED ARTICLES  ಬಿಜೆಪಿ ಪಕ್ಷ ಸೇರಿದ ಧಾರೇಶ್ವರದ ಯುವಕರು.

ಜಿಲ್ಲಾ ಪ್ರಭಾರಿಗಳಾಗಿ ಚುನಾವಣಾ ಸಂಯೋಜಕರಾಗಿ ಹಾಗೂ ಬಿಜೆಪಿಯ ಪ್ರಮುಖ ಲೀಡರ್ ಗಳ ಸಾಲಿನಲ್ಲಿ ನಿಂತು, ಟಿಕೆಟ್ ಆಕಾಂಕ್ಷಿಯೂ ಆಗಿ ಎಂ.ಜಿ ಭಟ್ಟ ರವರು ಟಿಕೆಟ್ ಸಿಗದಿದ್ದರೂ ಒಂದಿನಿತೂ ಬೇಸರಿಸಿಕೊಳ್ಳದೆ, ಪಕ್ಷಕ್ಕಾಗಿ ದುಡಿದು ಸೈ ಅನಿಸಿಕೊಂಡಿದ್ದಾರೆ. ಅವರ ಕಾರ್ಯದ ಬಗ್ಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.