ಜೊಯಿಡಾ: ತಾಲೂಕಿನ ಕುವೇಸಿಯ ಕ್ಯಾನೋಪಿ ವಾಕ್ ಸಮೀಪದ ನದಿಯಲ್ಲಿ ಮುಳುಗಿ ಅರಣ್ಯ ನೌಕರನೋರ್ವ ಮೃತಪಟ್ಟ ಘಟನೆ ನಡೆದಿದೆ. ದಾಂಡೇಲಿ ಅರಣ್ಯ ವಿಭಾಗದ ಸಿಬ್ಬಂದಿ ಪವನ್‌ಕುಮಾರ್ (34) ಎನ್ನುವವರೇ ಮೃತಪಟ್ಟವರು. ವಿವಿಧ ಮರಗಳ ಸಂಶೋಧನೆ ನಡೆಸುತ್ತಿದ್ದ ದಾಂಡೇಲಿಯ ಅರಣ್ಯ ನೌಕರರು ಕ್ಯಾನೋಪಿ ವಾಕ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಪವನ್‌ಕುಮಾರ್ ನದಿಯಲ್ಲಿ ಮುಳುಗಿದ್ದಾರೆ.

RELATED ARTICLES  ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ.

ಇವರನ್ನು ಚಿಕಿತ್ಸೆಗೆ ರಾಮನಗರದ ಸರ್ಕಾರಿ ಆಸ್ಪತ್ರೆಗೆ ಇಲಾಖೆಯ ವಾಹನದಲ್ಲಿ ರಾಮನಗರಕ್ಕೆ ಕರೆತರಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ರಾಮನಗರ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಬಸವರಾಜ ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿ, ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ.

RELATED ARTICLES  ಶ್ರೀರಾಮ ಗೀತಮ್