ಕುಮಟಾ : ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ನೂತನ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿ ಅವರ ವಿಜಯೋತ್ಸವ ಹಾಗೂ ಕಾರ್ಯಕರ್ತರಿಂದ ನಡೆದ ಬೈಕ್ ರ್ಯಾಲಿ ಪಟ್ಟಣದಲ್ಲಿ ಗಮನ ಸೆಳೆಯಿತು. ತೆರೆದ ವಾಹನದಲ್ಲಿ ನೂತನ ಶಾಸಕರನ್ನು ಮೆರವಣಿಗೆ ಮಾಡುವುದರ ಮೂಲಕ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಅವರಿಗೆ ಸೇಬುಹಣ್ಣಿನ ಹಾರ ಹಾಕಿ ಕಾರ್ಯಕರ್ತರು ಗೌರವಾರ್ಪಣೆ ಮಾಡಿದರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಕಾರ್ಯಕರ್ತರು ಭಾರತಮಾತೆಗೆ ಜಯಕಾರ ಕೂಗಿದರು.

RELATED ARTICLES  ಉ.ಕ ದಲ್ಲಿ ಮೂರನೇ ಬಲಿ ಪಡೆದ ಕೊರೋನಾ : ಇಂದೂ ಹೆಚ್ಚಿದೆ ಪಾಸಿಟೀವ್ ಪ್ರಕರಣ

ಪಟ್ಟಣದ ಹವ್ಯಕ ಸಭಾ ಭವನದಿಂದ ಹೊರಟ ಮೆರವಣಿಗೆಯು ನೆಲ್ಲಿಕೇರಿ ಮಾರ್ಗವಾಗಿ ಗೆಬ್ ಸರ್ಕಲ್ ಮೂಲಕವಾಗಿ ಪಟ್ಟಣವನ್ನು ಪ್ರವೇಶಿಸಿ, ಪಟ್ಟಣದಲ್ಲಿ ಮೆರವಣಿಗೆ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ಪುನಃ ಹವ್ಯಕ ಸಭಾಭವನಕ್ಕೆ ಬಂದು ಸಮಾಪ್ತಿಗೊಂಡಿತು. ಕಾರ್ಯಕರ್ತರಿಗೆ ಸವಿಯಾದ ಪಾನಕ ವ್ಯವಸ್ಥೆ ಮಾಡಲಾಗಿತ್ತು. ನಂತರ ಶಾಸಕರು ತಮಗಾಗಿ ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಈ ಸಂದರ್ಭದಲ್ಲಿ ಹಮ್ಮಿಕೊಂಡಿದ್ದರು. ನಂತರದಲ್ಲಿ ಕಾರ್ಯಕರ್ತರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಶಾಸಕರು ಮಾಡಿಸಿದ್ದರು.

RELATED ARTICLES  ಸಂಗೀತ ಪರೀಕ್ಷೆಯಲ್ಲಿ ಕುಮಟಾ ಬಾಲಕಿಯರ ಸಾಧನೆ