ಹೊನ್ನಾವರ : ತಾಲೂಕಿನ ಗೇರುಸೊಪ್ಪದಿಂದ ಹೊನ್ನಾವರಕ್ಕೆ ಬರುತ್ತಿದ್ದ ಪ್ಯಾಸೆಂಜರ್ ಟೆಂಪೋ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿರುವ ಘಟನೆ ಗೇರುಸೊಪ್ಪಾ ಹೊನ್ನಾವರ ಮಾರ್ಗಮಧ್ಯೆ ನಡೆದಿದೆ. ಘಟನೆಯಿಂದಾಗಿ ಹತ್ತಾರು ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಮೂರು ಜನರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿದೆ. ಘಟನೆಯ ಸ್ಥಳಕ್ಕೆ ಪೊಲೀಸರು ಹಾಗೂ ಇತರ ಅಧಿಕಾರಿಗಳು ಭೇಟಿನೀಡಿದ್ದಾರೆ.

RELATED ARTICLES  ಭೀಕರ ಅಪಘಾತ : ಓರ್ವ ಸಾವು.

ಘಟನೆಯಿಂದಾಗಿ ಸ್ಥಳದಲ್ಲಿ ಕೆಲ‌ಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ಮಾಡಲಾಗಿದೆ. ವಿವಿಧೆಡೆ ಸಮಾರಂಭಗಳು ನಡೆಯುತ್ತಿದ್ದು, ಜನ ಓಡಾಟ ಜಾಸ್ತಿಯಾಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಆತಂಕ ಸೃಷ್ಟಿಸಿದೆ.

RELATED ARTICLES  ನಾಮಪತ್ರ ಸಲ್ಲಿಸದೆ ಶಾರದಾ ಶೆಟ್ಟಿಯವರಿಗೆ ಬೆಂಬಲ ಸೂಚಿಸಿದ ಶಿವಾನಂದ ಹೆಗಡೆ.